ಕಲಘಟಗಿ prajakiran. com : ತಾಲೂಕಿನ ಬಿ. ಶಿಗಿಗಟ್ಟಿ ತಾಂಡಾದ ಹತ್ತಿರದ ಸೂರಪ್ಪನ ಕೆರೆಯಲ್ಲಿ ಮುಳುಗಿ ಯುವಕನೋರ್ವ ಸಾವನಪ್ಪಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಶಿಗಿಗಟ್ಟಿ ತಾಂಡಾದ ಸಂಜು ಲಮಾಣಿ (27) ಈ ಯುವಕನೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ದೌಡಾಯಿಸಿ ಯುವಕನ ಮೃತದೇಹವನ್ನು ಹೊರ ತೆಗೆಯುವ ಕಾರ್ಯಾಚರಣೆ ಮಾಡಿದರು. ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಕಲಘಟಗಿ ಪೊಲೀಸರು ಕೂಡ ಭೇಟಿ ನೀಡಿ ಯುವಕನ ಶವ ಹೊರ […]
ಅಪರಾಧ
ಧಾರವಾಡದ ಮುಳಮುತ್ತಲದಲ್ಲಿ ಪ್ರಿಯಕರನ ಜೊತೆಗೆ ಸೇರಿ ಪತಿಯನ್ನೇ ಕೊಂದ ಪಾಪಿ ಪತ್ನಿ ಅರೆಸ್ಟ್…..!
ಧಾರವಾಡ prajakiran. com ಡಿ.14 : ಪತ್ನಿಯೇ ಪ್ರಿಯಕರನ ಜೊತೆಗೆ ಸೇರಿ ಪತಿಯನ್ನೇ ಕೊಂದ ಘಟನೆ ಧಾರವಾಡದ ಮುಳಮುತ್ತಲದಲ್ಲಿ ನಡೆದಿದೆ. ಮಂಗಳವಾರ ಬೆಳಿಗಿನ ಜಾವ 1-35 ಗಂಟೆಗೆ ಮುಳಮುತ್ತಲ ಗ್ರಾಮದ ಭೀಮಪ್ಪ ಸಿದ್ದಪ್ಪ ಕರಿಶಿದ್ದನವರ ಮನೆಯಲ್ಲಿ ಮಲಗಿರುವಾಗ ಮೃತನ ಹೆಂಡ್ತಿ ಆರೋಪಿ ನಂ 1 ನೇದವನಾದ ಶಿವಾನಂದ ನಾಗಪ್ಪ ನಿಂಬೋಜಿ ಜೊತೆಗೆ ಸೇರಿ ಸ್ಚೈಚ್ ಹಾಕಿದ್ದಳು. ಭೀಮಪ್ಪ ಸಿದ್ದಪ್ಪ ಕರಿಶಿದ್ದನವರ ಈತನಿಗೆ ಆಕೆಯ ಲವ್ವಿ ಡವ್ವಿ ಗೊತ್ತಾಗಿ ಗಂಡ ಹೆಂಡತಿ ಇಬ್ಬರು ಪದೇ ಪದೇ ತಂಟೆ ಮಾಡುತ್ತಿದ್ದುದಕ್ಕೆ ಆರೋಪಿ […]
ಧಾರವಾಡದ ಉಪನಗರ ಠಾಣೆ ಪೊಲೀಸರಿಗೆ ಹೆದರಿ ಕೈ ಕೊಯ್ದುಕೊಂಡ ರೌಡಿಶೀಟರ್ ಮನು….!
ಧಾರವಾಡ prajakiran.com : ರೌಡಿಶೀಟರ್ ಒಬ್ಬ ಧಾರವಾಡದ ಉಪನಗರ ಠಾಣೆ ಪೊಲೀಸರಿಗೆ ಹೆದರಿ ಕೈ ಕೊಯ್ದುಕೊಂಡ ಘಟನೆ ಶನಿವಾರ ಸಂಜೆ ಧಾರವಾಡದ ರಾಮನಗರ ಅತ್ತಿಕೊಳ್ಳದಲ್ಲಿ ನಡೆದಿದೆ. ಆತನನ್ನು ಮನು ಅಲಿಯಾಸ್ ಮನ್ಮಥ್ ಮಹಾರಾಜ್ ಕೊರವರ ಎಂದು ಗುರುತಿಸಲಾಗಿದೆ. ತಕ್ಷಣ ಸ್ಥಳೀಯರು ಆತನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಇತನ ಮೇಲೆ ಈಗಾಗಲೇ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಇದೆ. ಇತನನ್ನು ಇತ್ತೀಚೆಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ರೌಡಿಶೀಟರ್ ಅಲ್ಲಾವುದ್ದೀನ್ ಅಲಿಯಾಸ್ […]
ಧಾರವಾಡ : ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸಾವು
ಧಾರವಾಡ prajakiran.com : ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಧಾರವಾಡದ ಯರಿಕೊಪ್ಪ ಬೈಪಾಸ್ ಬಳಿ ನಡೆದಿದೆ. ಇಲ್ಲಿನ ಹೊಸಯಲ್ಲಾಪುರದ ಅಮನ್ ಸೇರಿದಂತೆ ಇಬ್ಬರು ಯುವಕರು ಮೃತಪಟ್ಟಿದ್ದು, ಮತ್ತೊಬ್ಬನ ಕಾಲಿಗೆ ಗಾಯವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿ ಮೃತಪಟ್ದಿದ್ದಾರೆ. ಮೃತಪಟ್ಟರ ಪೈಕಿ ಓರ್ವನ ಗುರುತು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು […]
ಧಾರವಾಡದ ಮಹಾನಗರ ಪಾಲಿಕೆ ಆವರಣದಲ್ಲಿ ಹಾಡಹಗಲೇ ಗುತ್ತಿಗೆದಾರನ ಮೇಲೆ ಮಾರಣಾಂತಿಕ ಹಲ್ಲೆ …..!
ಧಾರವಾಡ prajakiran.com : ಧಾರವಾಡ ನಗರದ ಹೃದಯ ಭಾಗದಲ್ಲಿರುವ ಮಹಾನಗರ ಪಾಲಿಕೆ ಆವರಣದಲ್ಲಿ ಹಾಡಹಗಲೇ ಗುತ್ತಿಗೆದಾರನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾದ ಘಟನೆ ಬುಧವಾರ ನಡೆದಿದೆ. ಇದು ಪಾಲಿಕೆ ಸಿಬ್ಬಂದಿ ಹಾಗೂ ಪಾಲಿಕೆ ಆವರಣಕ್ಕೆ ದಿನ ಬೆಳಗಾದರೆ ಆಗಮಿಸುವ ಸ್ಥಳೀಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಆಟೋದಲ್ಲಿ ಬಂದ ಹಲವರು ಗುತ್ತಿಗೆದಾರನಿಗೆ ಬಡಿಗೆಯಿಂದ ಮನ ಬಂದಂತೆ ಬಡಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ತೀವ್ರವಾಗಿ ಗಾಯಗೊಂಡ ಗುತ್ತಿಗೆದಾರ ಅಜೀಜ್ ಮಾಲಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. […]
ಹುಬ್ಬಳ್ಳಿಯಲ್ಲಿ ಐದು ಮೊಬೈಲ್ ಕಳ್ಳರ ಬಂಧನ : 1.80 ಲಕ್ಷ ಮೌಲ್ಯದ 14 ಮೊಬೈಲ್ ವಶ
ಹುಬ್ಬಳ್ಳಿ prajakiran. com : ಮೊಬೈಲ್‍ಗಳನ್ನು ಕಳವು ಮಾಡಿ ಆಟೋರಿಕ್ಷಾದಲ್ಲಿ ಪರಾರಿಯಾಗುತ್ತಿದ್ದ 5 ಜನ ಆರೋಪಿಗಳನ್ನು ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹಳೇಮಂಟೂರ ರೋಡನಲ್ಲಿ ಐದು ಜನರು ಎಲ್ಲಿಂದಲೋ ಮೊಬೈಲ್ ಗಳನ್ನು ಕಳವು ಮಾಡಿಕೊಂಡು ಆಟೋರಿಕ್ಷಾದಲ್ಲಿ ಹೋಗುತ್ತಿದ್ದಾರೆಂಬ ಖಚಿತ ಮಾಹಿತಿ ಮೆರೆಗೆ ಬೆಂಡಿಗೇರಿ ಪೋಲಿಸ ಠಾಣೆಯ ಪಿಐ ಶ್ಯಾಂರಾಜ ಸಜ್ಜನ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಐದು ಜನರನ್ನು ಬಂಧಿಸಿ ಅವರಿಂದ 1.80 ಲಕ್ಷ ಮೌಲ್ಯದ 14 ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಆಟೋರಿಕ್ಷಾವನ್ನು […]
ಧಾರವಾಡದಲ್ಲಿ ತಪ್ಪಿದ ಬಸ್ ದುರಂತ ಮದುವೆ ದಿಬ್ಬಣಕ್ಕೆ ಹೊರಟಿದ್ದ ಬಸ್ಸಿನ ಬ್ರೇಕ್ ಫೇಲ್ ..
ಧಾರವಾಡ prajakiran. com : ಮದುವೆಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ಸಿನ ಬ್ರೇಕ್ ಫೇಲ್ ಆಗಿ ಬಸ್ಸು ನವಲೂರು ಬ್ರಿಜ್ ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ಬುಧವಾರ ನಡೆದಿದೆ. ಕೊಪ್ಪಳ ಡಿಪೋದ ಸಾರಿಗೆ ಸಂಸ್ಥೆ ಬಸ್ಸು ಇದಾಗಿದ್ದು, ಹುಬ್ಬಳ್ಳಿ ಕಡೆಗೆ ಮದುವೆಗೆಂದು ಹೊರಟಿತ್ತು. ಬಸ್ಸಿನಲ್ಲಿ 50 ಜನ ಪ್ರಯಾಣಿಸುತ್ತಿದ್ದರು. ನವಲೂರು ಬಳಿ ಬರುತ್ತಿದ್ದಂತೆ ಬಸ್ಸಿನ ಬ್ರೇಕ್ ಫೇಲ್ ಆಗಿದ್ದು, ಕೂಡಲೇ ಎಚ್ಚೆತ್ತುಕೊಂಡ ಚಾಲಕ ಬಸ್ಸನ್ನು ಮುಖ್ಯ ರಸ್ತೆ ಬಿಟ್ಟು ಪಕ್ಕದ ರಸ್ತೆಗೆ ತೆಗೆದುಕೊಂಡು ಬ್ರಿಜ್ ತಡೆಗೋಡೆಗೆ ಡಿಕ್ಕಿಪಡಿಸಿದ್ದಾನೆ. […]
ಧಾರವಾಡ : ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಬಿ.ಆರ್.ಟಿ.ಎಸ್. ಬಸ್…..!
ಧಾರವಾಡ prajakiran. com : ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬಿ.ಆರ್.ಟಿ.ಎಸ್. ಬಸ್ ಡಿಕ್ಕಿ ಹೊಡೆದ ಘಟನೆ ಇಲ್ಲಿನ ಹುಬ್ಬಳ್ಳಿ ರಸ್ತೆಯ ಕೋರ್ಟ್ ಎದುರು ಇಂದು ಮುಂಜಾನೆ ಸಂಭವಿಸಿದೆ. ಬಾಗಲಕೋಟ ಜಿಲ್ಲೆಯ ಬೈರಮಟ್ಟಿಯ ಮಲ್ಲಣ್ಣ ಸಂಗಪ್ಪ ಮೇಟಿ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರ ಸಹಾಯದೊಂದಿಗೆ ಸಂಚಾರ ಠಾಣೆಯ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಲ್ಲಣ್ಣ ಮೇಟಿ ರಸ್ತೆ ದಾಟುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಈ ಕುರಿತು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share on: WhatsApp
ಧಾರವಾಡದ 2ನೇ ಅಧಿಕ ಜಿಲ್ಲಾ ನ್ಯಾಯಾಲಯದಿಂದ ಅತ್ಯಾಚಾರ ಆರೋಪಿಗೆ ಹತ್ತು ವರ್ಷ ಶಿಕ್ಷೆ
ಧಾರವಾಡ prajakiran.com : ಅತ್ಯಾಚಾರ ಆರೋಪಿಗೆ ಧಾರವಾಡದ 2ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಹತ್ತು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ. ಆರೋಪಿ ಸೈಯ್ಯದ ಸಾಜೀದ ಹುಸೇನ ತಂದೆ ಸೈಯ್ಯದ ಸಮಿವುದ್ದಿನ ಸುಲೇದಾರ ಎಂಬಾತ ಆರೋಪ ಎಸಗಿದ ಬಗ್ಗೆ ರುಜುವಾತ ಆಗಿದ್ದರಿಂದ ಧಾರವಾಡದ 2ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಸಿ. ಸದಾನಂದಸ್ವಾಮಿ ಅವರು ಈ ಆದೇಶ ಹೊರಡಿಸಿದರು. ಕಲಂ: 366 IPC ಪ್ರಕಾರ […]
ಹುಬ್ಬಳ್ಳಿಯಲ್ಲಿ ಎ ಎಸ್ ಐ ಕೊರಳ ಪಟ್ಟಿಗೆ ಕೈ ಹಾಕಿದಾತನ ವಿರುದ್ಧ ಪ್ರಕರಣ ದಾಖಲು…..!
ಹುಬ್ಬಳ್ಳಿ prajakiran.com : ಕೌಟುಂಬಿಕ ಜಗಳವೊಂದು ವಿಕೋಪಕ್ಕೆ ತಿರುಗಿ ಎ ಎಸ್ ಐ ಕೊರಳ ಪಟ್ಟಿಗೆ ಕೈ ಹಾಕಿದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ವಿಚಾರಣೆಗೆಂದು ಠಾಣೆಗೆ ಬಂದ ವ್ಯಕ್ತಿಯೊಬ್ಬ ಎಎಸ್‌ಐ ಕೊರಳ ಪಟ್ಟಿ ಹಿಡಿದು ಅವಾಚ್ಯ ಪದಗಳಿಂದ ನಿಂದಿಸಿದ. ಇದರಿಂದಾಗಿ ಮುಜುಗರಕ್ಕೊಳಗಾದ ಎ ಎಸ್ ಐ ಆತನ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನವನಗರದ ನಿವಾಸಿ ಆನಂದ ಭಂಗಿ ವಿರುದ್ಧ ಎಎಸ್‌ಐ ರುದ್ರಗೌಡ ಸುಧಿ ಎಂಬುವವರು ದೂರು ನೀಡಿದ್ದಾರೆ. ಗಂಡ-ಹೆಂಡತಿ ಜಗಳದ […]









