ಕ್ರೀಡೆ

ಬಿಸಿಸಿಐ : ಟಿ 20 ವಿಶ್ವಕಪ್‌ ಯುಎಇಗೆ ಸ್ಥಳಾಂತರ

ಮುಂಬೈ prajakiran.com : ಕೊರೋನಾ ಭೀತಿ ಹಿನ್ನೆಲೆ ಈ ವರ್ಷದ ಟಿ20 ವಿಶ್ವಕಪ್‌ನ್ನು ಯುಎಇಗೆ ಸ್ಥಳಾಂತರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ನಿರ್ಧರಿಸಿದೆ. ಭಾರತದಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ಐಪಿಎಲ್​ ಕೂಡಾ ದುಬೈನಲ್ಲಿ ನಡೆಯಲಿದೆ ಎಂದು ಈ ಹಿಂದೆ ಬಿಸಿಸಿಐ ಘೋಷಿಸಿತ್ತು. ಇದೀಗ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳನ್ನು ಯುಎಇಗೆ ಸ್ಥಳಾಂತರ ಮಾಡಬೇಕೆಂದು ಇಂದು ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ತೀರ್ಮಾನಿಸಿದೆ. ಟಿ20 ವಿಶ್ವಕಪ್ ನ್ನು ಯುಎಇಗೆ ಸ್ಥಳಾಂತಸುತ್ತಿದ್ದೇವೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ತಿಳಿಸಿದ್ದೇವೆ. ದಿನಾಂಕಗಳನ್ನು ಐಸಿಸಿ […]

ಕ್ರೀಡೆ

ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುವ ರಾಜ್ಯದ ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರೂ. ಪ್ರೋತ್ಸಾಹ ಧನ

ಬೆಂಗಳೂರು prajakiran.com :‌ ಒಲಿಂಪಿಕ್ಸ್‌ಗೆ ಆಯ್ಕೆಯಾಗುವ ನಮ್ಮ ರಾಜ್ಯದ ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ. ಜಪಾನ್‌ನ ಟೋಕಿಯೋದಲ್ಲಿ ಒಲಿಂಪಿಕ್ ಕ್ರೀಡಾಕೂಟವು ಜುಲೈ 23ರಿಂದ ಸೆಪ್ಟೆಂಬರ್ 5ರ ವರೆಗೆ ನಡೆಯಲಿದ್ದು, ಇದಕ್ಕೆ ರಾಜ್ಯದಿಂದ ಒಬ್ಬರ ಆಯ್ಕೆಯಾಗಿದ್ದಾರೆ. ಸಚಿವ ನಾರಾಯಣ ಗೌಡ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಭಾರತ ಸರ್ಕಾರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ನಮ್ಮ ದೇಶದ ಅರ್ಹ ಕ್ರೀಡಾಪಟುಗಳ ಸಂಭವನೀಯ […]

ಕ್ರೀಡೆ

ಸ್ಟೇಡಿಯಂನಲ್ಲಿ ಮಿಲ್ಖಾ ಸಿಂಗ್ ಬದಲು ಫರಾನ್ ಅಕ್ತರ್ ಫೋಟೊ

ನೋಯ್ಡಾ prajakiran.com : ಭಾರತದ ಅಥ್ಲೀಟ್ ದಿಗ್ಗಜ ಮಿಲ್ಖಾ ಸಿಂಗ್ ಅವರು ಇತ್ತೀಚೆಗಷ್ಟೇ ನಿಧನರಾಗಿದ್ದು, ಇದೀಗ ಮಿಲ್ಕಾ ಸಿಂಗ್ ಅವರ ಫೋಟೋ ಬದಲು ಫರಾನ್ ಅಕ್ತರ್ ಅವರ ಫೋಟೋ ಹಾಕಿದ ಘಟನೆ ದೆಹಲಿಯಲ್ಲಿ ನಡೆದಿದೆ. ಮಿಲ್ಖಾ ಸಿಂಗ್ ಅವರ ಆತ್ಮಕತೆ ಆಧಾರಿತ ಸಿನಿಮಾ ‘ಭಾಗ್ ಮಿಲ್ಖಾ ಭಾಗ್‌’ನಲ್ಲಿ ಫರಾನ್ ಅಕ್ತರ್ ಮಿಲ್ಖಾ ಸಿಂಗ್ ಅವರ ಪಾತ್ರವನ್ನು ನಿಭಾಯಿಸಿದ್ದರು. ಇದೀಗ ಮಿಲ್ಕಾ ಸಿಂಗ್ ಅವರ ನಿಧನರಾದ ಹಿನ್ನೆಲೆ ನೋಯ್ಡಾದ ಸ್ಟೇಡಿಯಂ ಒಂದರಲ್ಲಿ ಮಿಲ್ಖಾ ಸಿಂಗ್ ಅವರಿಗೆ ಅಂತಿಮ ನಮನ […]

ಕ್ರೀಡೆ

ಇಂದು ಸಂಜೆ ಸರ್ಕಾರಿ ಗೌರವಗಳೊಂದಿಗೆ ‘ಮಿಲ್ಖಾ ಸಿಂಗ್’ ಅಂತ್ಯಕ್ರಿಯೆ

ಪಂಜಾಬ್ prajakiran. com : ಚಾಂಪಿಯನ್‌ ಓಟಗಾರ ಮಿಲ್ಖಾ ಸಿಂಗ್ ನಿಧನರಾಗಿದ್ದು, ಇಂದು ಸಂಜೆ ಚಂಢೀಗಡದಲ್ಲಿ ಅವರ ಅಂತ್ರಕ್ರಿಯೆ ನಡೆಯಲಿದೆ. ಮಿಲ್ಖಾ ಸಿಂಗ್ ಅವರ ಚಂಢೀಗಡದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಮಿಲ್ಕಾ ಅವರ ಅಂತಿಮ ದರ್ಶನಕ್ಕೆ ಗಣ್ಯರು ಬರುವ ಸಾಧ್ಯತೆ ಇದ್ದು, ನಿವಾಸದ ಬಳಿ ಪೊಲೀಸರ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ. ಕಳೆದ ತಿಂಗಳು ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ಮಿಲ್ಖಾ […]

ಕ್ರೀಡೆ

ಕೋವಿಡ್‌ನಿಂದಾಗಿ ಪತ್ನಿ ಅಗಲಿದ ಬೆನ್ನ ಹಿಂದೆಯೇ ಅಥ್ಲೀಟ್ ಮಿಲ್ಕಾಸಿಂಗ್ ಕೂಡ ವಿಧಿವಶ…..!

ದಂತ ಕಥೆ ಮಿಲ್ಕಾಸಿಂಗ್ ಇನ್ನು ನೆನಪು ಮಾತ್ರ….! ಪಂಜಾಬ್ prajakiran.com : ದೇಶದ ಹೆಮ್ಮೆಯ ಅಥ್ಲೆಟಿಕ್ ದಂತಕಥೆ, ‘ಫ್ಲೈಯಿಂಗ್ ಸಿಖ್’ ಎಂದೇ ಖ್ಯಾತಿಹೊಂದಿದ್ದ ಪ್ರಸಿದ್ದ ಓಟಗಾರ( ಅಥ್ಲೀಟ್ ) ಮಿಲ್ಕಾ ಸಿಂಗ್ (91) ಶುಕ್ರವಾರ ತಡರಾತ್ರಿ ವಿಧಿವಶರಾದರು. ಕಳೆದ ಹಲವು ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಅವರು ಚಂಡಿಗಢದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . ಆದರೆ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದರು. ಅವರ ಪತ್ನಿ, ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಅವರು ಇತ್ತಿಚೆಗೆ […]

ಕ್ರೀಡೆ

ಬೆಸ್ಟ್ ಬ್ಯಾಟ್ಸ್‌ಮ್ಯಾನ್‌ಗಳ ಪಟ್ಟಿಯಲ್ಲಿ ವಿರಾಟ್ ಕೋಹ್ಲಿಗೆ 4ನೇ ಸ್ಥಾನ

ನವದೆಹಲಿ prajakiran.com : ಐಸಿಸಿ ಬೆಸ್ಟ್ ಬ್ಯಾಟ್ಸ್‌ಮ್ಯಾನ್‌ಗಳ ಪಟ್ಟಿ ಬಿಡುಗಡೆಯಾಗಿದ್ದು , ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಗೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಸಿಕ್ಕಿದೆ. ವಿರಾಟ್ 814 ರೇಟಿಂಗ್ ಹೊಂದಿದ್ದು, ಈ ಮೂಲಕ ಬೆಸ್ಟ್ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಇನ್ನು ಲಿ 891 ರೇಟಿಂಗ್ ಮೂಲಕ ಮೊದಲ ಸ್ಥಾನವನ್ನು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಪಡೆದಿದ್ದಾರೆ. 886 ರೇಟಿಂಗ್ ನ್ಯೂಜಿಲೆಂಡ್ ಕೇನ್ ವಿಯಮ್ಸನ್ ಎರಡನೇ ಸ್ಥಾನ. 878 ರೇಟಿಂಗ್ ಮೂಲಕ ಆಸ್ಟ್ರೇಲಿಯಾದ ಮಾರ್ನಸ್ ಲಾಬುಶ್ಚಾಗ್ನೆ […]

ಕ್ರೀಡೆ

ಕರ್ನಾಟಕದ ಮಾಜಿ ಕ್ರಿಕೆಟಿಗ ಬಿ. ವಿಜಯಕೃಷ್ಣ ಇನ್ನಿಲ್ಲ

ಬೆಂಗಳೂರು prajakiran.com : ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಬಿ. ವಿಜಯಕೃಷ್ಣ ಗುರುವಾರ ಬೆಳಗಿನ ಜಾವ ನಿಧನರಾಗಿದ್ದಾರೆ. 71 ವರ್ಷದ ವಿಜಯಕೃಷ್ಣ ಬಹು ಅಂಗಾಂಗಗಳ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. 80 ಪಂದ್ಯಗಳಲ್ಲಿ 2 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಲ್ಲದೇ 194 ವಿಕೆಟ್ ಕೂಡ ಪಡೆದಿದ್ದರು. ಕರ್ನಾಟಕ ತಂಡವು 1973-74ರಲ್ಲಿ ಮೊದಲ ಸಲ ರಣಜಿ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರ […]

ಕ್ರೀಡೆ

ಭಾರತ ತಂಡಕ್ಕೆ ಮತ್ತಿಬ್ಬರು ತರಬೇತುದಾರರ ನೇಮಕ

ನವದೆಹಲಿ prajakiran.com : ಮುಂದಿನ ತಿಂಗಳು ನಡೆಯಲಿರುವ ಶ್ರೀಲಂಕಾ ಮತ್ತು ಭಾರತ ಏಕದಿನ ಕ್ರಿಕೆಟ್‌ ಮತ್ತು ಟಿ20 ಕ್ರಿಕೆಟ್ ಸರಣಿ ಪಂದ್ಯ ಆರಂಭವಾಗಲಿದ್ದು, ಭಾರತ ತಂಡಕ್ಕೆ ಮತ್ತಿಬ್ಬರು ತರಬೇತುದಾರರನ್ನು ನೇಮಿಸಲಾಗಿದೆ. ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಜತೆಗೆ ಟಿ. ದಿಲೀಪ್‌ ಮತ್ತು ಪಾರಸ್‌ ಮಾಂಬ್ರೆ ಅವರನ್ನು ಆಯ್ಕೆ ಮಾಡಲಾಗಿದ್ದು, ಟಿ. ದಿಲೀಪ್‌ ಫೀಲ್ಡಿಂಗ್‌ ಮತ್ತು ಪಾರಸ್‌ ಮಾಂಬ್ರೆ ಬೌಲಿಂಗ್‌ ಕೋಚ್‌ ಆಗಿರುತ್ತಾರೆ. ಈಗಾಗಲೇ ಬಿಸಿಸಿಐ ಅನುಭವಿ ಮತ್ತು ಯುವ ಆಟಗಾರರನ್ನು ಒಳಗೊಂಡ ಒಟ್ಟು 20 ಸದಸ್ಯರ ಭಾರತ […]

ಕ್ರೀಡೆ

ಕಿಚ್ಚ ಸುದೀಪ್‌ ಸೇರಿದಂತೆ ಸೆಲೆಬ್ರಿಟಿಗಳ ಜೊತೆ ಚೆಸ್ ಆಡಲಿದ್ದಾರೆ ವಿಶ್ವನಾಥ್ ಆನಂದ್

ಬೆಂಗಳೂರು Prajakiran.com : ಮಾಜಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಜೂ.13ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ಚೆಸ್ ಆಟವಾಡಲಿದ್ದಾರೆ. ಸಂಜೆ 5ಕ್ಕೆ ಈ ಪಂದ್ಯಗಳು ಆರಂಭವಾಗಲಿದ್ದು, ತಾರೆಯರು, ಉದ್ಯಮಿಗಳೊಂದಿಗೆ ಆನಂದ್ ಆಟವಾಡಲಿದ್ದಾರೆ. ವಿಶೇಷವೆಂದರೆ ಈ ಪಂದ್ಯಗಳಲ್ಲಿ ಬಾಲಿವುಡ್‌ ನಟ‌ ಅಮೀರ್‌ ಖಾನ್‌, ಬಹುಭಾಷಾ ತಾರೆ, ಕರ್ನಾಟಕದ ಖ್ಯಾತ ನಟ ಕಿಚ್ಚ ಸುದೀಪ್‌ ಕೂಡಾ ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ನಟ ರೀತೇಶ್‌ ದೇಶಮುಖ್‌, ಗಾಯಕ ಅರಿಜಿತ್‌ ಸಿಂಗ್‌, ಗಾಯಕಿ ಅನನ್ಯಾ ಬಿರ್ಲಾ, ಕ್ರಿಕೆಟಿಗ ಯಜುವೇಂದ್ರ ಚಹಲ್‌, ಶಿಯೋಮಿ […]

ಕ್ರೀಡೆ

ಐಪಿಎಲ್ ನಡೆಸಲು ಬಿಸಿಸಿಐ ನಿರ್ಧಾರ : ದಿನಾಂಕ ಶೀಘ್ರ ಪ್ರಕಟ

ನವದೆಹಲಿ prajakiran.com : ಐಪಿಎಲ್​ 14ನೇ ಆವೃತ್ತಿಯ 2ನೇ ಭಾಗ ಹಾಗೂ ಟಿ20 ವಿಶ್ವಕಪ್​ ಟೂರ್ನಿಯ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಇಂದು ಬಿಸಿಸಿಐ ಮಹಾಸಭೆ ನಡೆಸಲಿದೆ. ಕೊರೋನಾ ಸೋಂಕಿನಿಂದ ಸ್ಥಗಿತಗೊಂಡಿರುವ ಐಪಿಎಲ್ ಟೂರ್ನಿಯನ್ನು ಸೆ.1 ರಿಂದ ಅ.15ರ ವರೆಗೆ ನಡೆಸಲು ಬಿಸಿಸಿಐ ಈಗಾಗಲೇ ಯೋಜನೆ ರೂಪಿಸಿದ್ದು, ಕೆಲವೇ ದಿನಗಳಲ್ಲಿ ವೇಳಾಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಕೊರೋನಾ ಸೋಂಕು ಇರುವುದರಿಂದ ಟಿ20 ವಿಶ್ವಕಪ್ ಟೂರ್ನಿ ಭಾರತದಲ್ಲೇ ನಡೆಸಲು ಮುಂದಾಗಿದ್ದು, ಜೂನ್ 1ರಂದು ನಡೆಯುವ ಐಸಿಸಿ ಸಭೆಯಲ್ಲಿ […]