Date : 2018-05-24

"ಬೆಂಗಳೂರು : ಸ್ಪೀಕರ್ ಸ್ಥಾನ ಗೆಲ್ಲಲು ಮತಗಳ ಕೊರತೆ ಎದುರಿಸುತ್ತಿರುವ ಬಿಜೆಪಿಯೂ ಮಾಜಿ ಸಚಿವ ಸುರೇಶಕುಮಾರ ಅವರನ್ನು ತನ್ನ ಸ್ಪೀಕರ್ ಅಭ್ಯರ್ಥಿಯಾಗಿ ಕಣಕ್ಕೀಳಿಸಿದೆ. 104 ಶಾಸಕರ ಬಲ ಹೊಂದಿರುವ ಬಿಜೆಪಿಯೂ ಬಹುಮತ ಇಲ್ಲದಿದ್ದರೂ 118 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ತನ್ನ ಅಭ್ಯರ್ಥೀಯನ್ನು ಕಣಕ್ಕಿಳಿಯುವ ಮೂಲಕ ಶೆಡ್ಡು ಹೊಡೆದಿದೆ. ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಳೇಯಕ್ಕೆ ಆತಂಕ ತಂದಿದ್ದು, ಎಲ್ಲಿ ತಮ್ಮ ಶಾಸಕರು ಅವರಿಗೆ ಮತ ಚಲಾಯಿಸುತ್ತಾರೋಎಂಬ ಭೀತಿ ಎದುರಾಗಿದೆ. ಈಗಾಗಲೇ ಕಾಂಗ್ರೆಸ್ ನಿಂದ ಮಾಜಿ ಸಚಿವ ರಮೇಶಕುಮಾರ ಸ್ಪರ್ಧಿಸುವುದು ಖಚಿತವಾಗಿದೆ. ಒಟ್ಟಿನಲ್ಲಿ ಸ್ಪೀಕರ್ ಚುನಾವಣೆಗೂ ಬಿಜೆಪಿ ಸ್ಪರ್ಧಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ. "