BREAKING NEWS(click on the news)----------
  • ದಕ್ಷ ಅಧಿಕಾರಿ ಅಜಯ್ ನಾಗಭೂಷಣಗೆ ವರ್ಗಾವಣೆ ಶಿಕ್ಷೆ : ಮಾಜಿ ಮೇಯರ್ ಶಿವು ಹಿರೇಮಠ ಅಸಮಾಧಾನ


    Date : 2017-11-13 SHARE

    ಧಾರವಾಡ : ಈ ಹಿಂದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ದಕ್ಷ ಅಧಿಕಾರಿ ಅಜಯ್ ನಾಗಭೂಷಣ ಅವರು ಕಾಲೇಜ್ ಶಿಕ್ಷಣ ಇಲಾಖೆಯ 300 ಕೋಟಿ ಕಂಪ್ಯೂಟರ್ ಖರೀದಿ ಹಗರಣ ಭೇದಿಸಿದಕ್ಕೆ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಿರುವುದು ಸರಿಯಾದ ಬೆಳವಣಿಗೆ ಅಲ್ಲ ಎಂದು ಮಾಜಿ ಮೇಯರ್ ಶಿವು ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 2016-17ನೇ ಸಾಲಿನಲ್ಲಿ 37 ಸಾವಿರ ಲ್ಯಾಪ್‍ಟ್ಯಾಪ್ ಖರೀದಿ ಪ್ರಕ್ರಿಯೆಗೂ ಹಾಗೂ 2017-18ನೇ ಸಾಲಿನ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಪ್ರತಿ ಲ್ಯಾಪ್ ಟ್ಯಾಪ್‍ಗೆ 10ಸಾವಿರ ರೂಪಾಯಿಯಯಷ್ಟು. ವ್ಯತ್ಯಾಸ ಕಂಡು ಬಂದಿದೆ. ಅಲ್ಲದೆ, ಖರೀದಿ ಪ್ರಕ್ರಿಯೆಯನ್ನು ನಾಲ್ಕು ತುಂಡು ಗುತ್ತಿಗೆಯಲ್ಲಿ ಖರೀದಿಸಲು ಉನ್ನತ ಶಿಕ್ಷಣ ಇಲಾಖೆ ಕಡತ ಮಂಡಿಸಿತ್ತು. ಅದನ್ನು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಅಜಯ ನಾಗಭೂಷಣ ನಿರಾಕರಿಸಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಸಕ್ಕರೆ ಆಯುಕ್ತರನ್ನಾಗಿ ವರ್ಗ ಮಾಡಿ ಹಗರಣ ನಡೆಸಲು ರಾಜ್ಯ ಸರ್ಕಾರವೇ ಅವಕಾಶ ಮಾಡಿಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಮಾಜಿ ಮೇಯರ್ ಶಿವು ಹಿರೇಮಠ ಪ್ರಶ್ನಿಸಿದ್ದಾರೆ. ರಾಜ್ಯದ ಒಂದೂವರೆ ಲಕ್ಷ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸುವ ಉನ್ನತ ಶಿಕ್ಷಣ ಇಲಾಖೆಯ 300 ಕೋಟಿ ಹಗರಣವನ್ನು ಬಯಲಿಗೆ ಎಳೆದು, ಆ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿ ಸುಭಾಷ ಚಂದ್ರ ಕುಂಟಿಯಾ ಅವರಿಗೆ ದಾಖಲೆಗಳ ಸಮೇತ ಲಿಖಿತ ದೂರು ನೀಡಿದ್ದಾರೆ. ಆದರೂ ಅವರನ್ನು ರಕ್ಷಣೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಹಾನಿಯನ್ನು ತಪ್ಪಿಸುವ ಬದಲಿಗೆ ಈ ರೀತಿ ವರ್ಗಾವಣೆ ಮಾಡಿರುವುದು ದುರಂತದ ಸಂಗತಿಯಾಗಿದೆ ಎಂದು ಶಿವು ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರಿಗೆ ಒತ್ತಡ ಹೇರಿದ್ದರು. ಅವರು ಒಪ್ಪದಿದ್ದಾಗ ಮಾನಸಿಕ ಕಿರುಕುಳ ನೀಡಿದಲ್ಲದೆ, ಅಲ್ಲಿಂದ ಎತ್ತಂಗಡಿ ಮಾಡಿರುವುದು ರಾಜ್ಯ ಸರ್ಕಾರದ ಕಾರ್ಯ ವೈಖರಿಗೆ ಕೈಗನ್ನಡಿಯಾಗಿದೆ ಎಂದು ಆಪಾದಿಸಿರುವ ಅವರು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹತ್ತು ಹಲವು ಹಿರಿಯ ಅಧಿಕಾರಿಗಳು ಒಂದಲ್ಲ ಒಂದು ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದಾರೆ. ಐಎಎಸ್ ಅಧಿಕಾರಿ ಡಿ.ಕೆ. ರವಿ, ಡಿವೈಎಸ್‍ಪಿ ಗಣಪತಿ ಸೇರಿದಂತೆ ಅನೇಕರು ಸಾವನ್ನಪ್ಪಿದ್ದಾರೆ. ಇದಲ್ಲದೆ, ಮುಖ್ಯಮಂತ್ರಿಯ ತವರು ಜಿಲ್ಲೆ ಮೈಸೂರಿನಲ್ಲಿ ಅಜಯ ನಾಗಭೂಷಣ ಅವರ ಪತ್ನಿ ಹಾಗೂ ಹಿರಿಯ ಐಎಎಸ್ ಅಧಿಕಾರಿಯಾಗಿದ್ದ ಶ್ರೀಮತಿ ಶಿಖಾ ಅವರು ಕೂಡ ಸಿಎಂ ಬಲಗೈ ಬಂಟ ಮರಿಗೌಡ ಅವರಿಂದ ದೌರ್ಜನ್ಯಕ್ಕೊಳಗಾಗಿದ್ದರು. ಇಂತಹ ಹತ್ತು ಹಲವು ಅಧಿಕಾರಿಗಳನ್ನು ರಕ್ಷಣೆ ನೀಡಿ, ಅವರಿಗೆ ಪೂರ್ಣ ಪ್ರಮಾಣದ ಅಧಿಕಾರ ನೀಡುವ ಬದಲಿಗೆ ಕಾಂಗ್ರೆಸ್ ಸರ್ಕಾರ ಅವರಿಗೆ ವರ್ಗಾವಣೆ ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಮೇಯರ್ ಶಿವು ಹಿರೇಂಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.