BREAKING NEWS(click on the news)----------
  • ಧಾರವಾಡ ಸಾಯಿಬಾಬಾ ಮಂದಿರದಿಂದ ಶ್ರೀ ಕ್ಷೇತ್ರ ಶಿರಡಿಗೆ ಭಕ್ತರ ಪಾದಯಾತ್ರೆ


    Date : 2017-11-13 SHARE

    ಧಾರವಾಡ: ಇಲ್ಲಿನ ಕೆಲಗೇರಿ ರಸ್ತೆಯಲ್ಲಿನ ಸಾಯಿಬಾಬಾ ಮಂದಿರದಿಂದ ಶ್ರೀ ಕ್ಷೇತ್ರ ಶಿರಡಿಗೆ ಭಕ್ತರ ಪಾದಯಾತ್ರೆ ಸೋಮವಾರ ತೆರಳಿತು. ಶ್ರೀ ಕ್ಷೇತ್ರ ಶಿರಡಿಯಲ್ಲಿ ಅತ್ಯಂತ ಭಕ್ತಿ-ಸಂಭ್ರಮಗಳಿಂದ ನಡೆಯುವ ಸಾಯಿಬಾಬಾರ 100 ನೇ ಪುಣ್ಯತಿಥಿ ಅಂಗವಾಗಿ ನಗರದ ಸಾಯಿಬಾಬಾ ಭಕ್ತರಾದ ಸಂಜು ಶಿಂಧೆ ನೇತೃತ್ವದಲ್ಲಿ 8 ಜನ ಭಕ್ತರು ಪಾದಯಾತ್ರೆ ಆರಂಭಿಸಿದರು. ನಗರದಿಂದ ಹೊರಟ ಭಕ್ತರು 22 ದಿನಗಳ ಪಾದಯಾತ್ರೆಯಲ್ಲಿ ಶ್ರೀ ಕ್ಷೇತ್ರ ಫಂಡರಪುರ ದರ್ಶನದ ಬಳಿಕ ಬಳಿಕ ಶಿರಡಿ ತಲುಪುವರು. ಸಾಯಿಬಾಬಾ ಮಂದಿರ ಟ್ರಸ್ಟ್ ಅಧ್ಯಕ್ಷ ಮಹೇಶ ಶೆಟ್ಟಿ ಅವರ ನೇತೃತ್ವದಲ್ಲಿ ಟ್ರಸ್ಟ್‍ನ ಪದಾಧಿಕಾರಿಗಳು ಪಾದಯಾತ್ರೆ ಮೂಲಕ ತೆರಳುತ್ತಿರುವ ಭಕ್ತರನ್ನು ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ವಿಜಯಾನಂದ ಶೆಟ್ಟಿ, ಉದಯ ಶೆಟ್ಟಿ, ಟಿ.ಟಿ.ಚವ್ಹಾಣ, ಸಂತೋಷ ಮಿಥಲಿ, ಸೋಮು ಮಲ್ಲಾಪೂರಮಠ ಮತ್ತು ನೂರಾರು ಭಕ್ತರು ಉಪಸ್ಥಿತರಿದ್ದರು.