BREAKING NEWS(click on the news)----------
  • ಮುಖ್ಯಮಂತ್ರಿ ಅಡುಗೆ ಅನಿಲ ಯೋಜನೆ ಡಿಸೆಂಬರ್ ನಿಂದ ಜಾರಿ


    Date : 2017-11-10 SHARE

    ಧಾರವಾಡ : ಬಹು ನಿರೀಕ್ಷಿತ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗೆ ಡಿ. ೧ರಿಂದ ಚಾಲನೆ ನೀಡಲಾಗುತ್ತದೆ. ಒಟ್ಟು ೫೫೯೧೯ ಫಲಾನುಭವಿಗಳಿಗೆ ಈ ಯೋಜನೆ ಸೌಲಭ್ಯ ದೊರೆಯಲಿದೆ ಎಂದು ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ತಿಳಿಸಿದರು. ೧೭೯೨೧ ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ಅಡುಗೆ ಅನಿಲ ಸೌಲಭ್ಯ ವಿತರಣೆ ಗುರಿ ಹೊಂದಲಾಗಿದೆ. ಕೇಂದ್ರದ ಉಜ್ವಲ ಯೋಜನೆಯಲ್ಲಿ ೨೨ ಸಾವಿರ ಪೈಕಿ ೧೩ ಸಾವಿರ ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ. ಆ ಯೋಜನೆಗೂ ನಮ್ಮ ಯೋಜನೆಗೂ ದೊಡ್ಡ ವ್ಯತ್ಯಾಸ ವಿದೆ. ಅವರದ್ದು ಕೇವಲ ೧೫೦೦ ರೂ. ಯೋಜನೆ, ಆದರೆ ನಮ್ಮದು ೪೦೪೦ ರೂ, ಭದ್ರತಾ ಠೇವಣಿ ಸೇರಿ ವೆಚ್ಚ ಮಾಡಲಾಗುತ್ತಿದೆ. ಕಟ್ಟಡ ಕಾರ್ಮಿಕರು ಸೇರಿ ಎಲ್ಲಾ ಜನರಿಗೂ ಸೌಲಭ್ಯ ತಲುಪಿಸಲಾಗುವುದು ಎಂದರು. ಉಜ್ವಲ ಯೋಜನೆ ಬಿಜೆಪಿಯಿಂದ ಕೆಳಮಟ್ಟದ ಪ್ರಚಾರ : ಬಿಜೆಪಿ ಉಜ್ವಲ ಹೆಸರಿನಲ್ಲಿ ಭಾರೀ ಪ್ರಚಾರ ಪಡೆದಿದೆ. ಅಷ್ಟು ಪ್ರಚಾರ ನಮಗೆ ಅವಶ್ಯಕತೆ ಇಲ್ಲ. ನಾವು ಪೊಟೋ ಪ್ರಿಯ, ಪ್ರಚಾರ ಪ್ರಿಯರಲ್ಲ ಎಂದು ಟೀಕೆ ಮಾಡಿದರು. ಇದೇವೇಳೆ ಹೊಸಪೇಟೆ ಶಾಸಕ ಆನಂದ ಸಿಂಗ್ ಅವರು ಟಿಪ್ಪು ಸುಲ್ತಾನ್ ಜಯಂತಿ ಮಾಡಿರುವುದಕ್ಕೆ ಸ್ವಾಗತಿಸಿದರು. ಬಿಜೆಪಿ ಡಿಕೆಶಿ ಸೇರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಬಿಜೆಪಿ ಯಾರೋ ಹಡೆದ ಮಕ್ಕಳ ದತ್ತು ಪಡೆಯುವುದು ಸರಿಯಲ್ಲ. ತಾಕತ್ ಇದ್ದರೆ ನಮ್ಮ ಹಾಗೆ ಶಕ್ತಿ ಯುತ, ದಷ್ಟ ಪುಷ್ಟ ಮಕ್ಕಳನ್ನು ತೆಗೆದುಕೊಂಡು ಪಕ್ಷ ಬಲಪಡಿಸಲು ಮುಂದಾಗಲಿ ಎಂದು ಸಲಹೆ ನೀಡಿದ ಅವರು ಬಿಜೆಪಿ ಯಲ್ಲಿ ಉಸಿರು ಗಟ್ಟುವ ವಾತವರಣವಿದೆ. ನಮಗೆ ಆ ಪಕ್ಷ ಸರಿ ಹೊಂದಲ್ಲ. ಆರ್ ಎಸ್ ಎಸ್, ಹಿಂದು ಸಂಘಟನೆಯ ಒತ್ತಡ ನಡೆಯಲ್ಲ ಎಂದರು. ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರಿಗೆ ಬೆದರಿಕೆ ಪತ್ರ ಬಂದಿರುವುದು ಸಾಮಾನ್ಯ ಹುಟ್ಟಿದವರೆಲ್ಲಾ ಸಾವು ಖಚಿತ ಇರೋದು ಹೋಗುವುದು ಸಹಜ ಇದಕ್ಕೆ ಅಂಜುವ ಪ್ರಶ್ನೆಯೇ ಇಲ್ಲ. ಇಂತಹ ಪತ್ರಗಳಿಗೆ ನಾವು ಹೆದರುವುದಲ್ಲ. ಇದು ಸರಿಯಲ್ಲ, ಇಂತಹ ಪತ್ರಗಳ ಕುರಿತು ಪೊಲೀಸ್ ತನಿಖೆ ಮುಂದುವರೆದಿದೆ. ಶೀಘ್ರದಲ್ಲೇ ಭೇಧಿಸಲಾಗುವುದು ಎಂದರು.