BREAKING NEWS(click on the news)----------
  • ಮಹಾಮನೆಯಲ್ಲಿ 113ನೇ ಮಾಸಿಕ ಶಿವಾನುಭವಗೋಷ್ಠಿ12ರಂದು


    Date : 2017-11-10 SHARE

    ಧಾರವಾಡ : ಇಲ್ಲಿಯ ಮನಗುಂಡಿಯ ಚನ್ನಯ್ಯನ ಗಿರಿಯಲ್ಲಿರುವ ಶ್ರೀ ಗುರುಬಸವ ಮಹಾಮನೆಯಲ್ಲಿ ನವೆಂಬರ್ 12ರಂದು ರವಿವಾರ ಬೆಳಗ್ಗೆ 10 ಗಂಟೆಗೆ 113ನೇ ಮಾಸಿಕ ಶಿವಾನುಭವಗೋಷ್ಠಿ ಅಂಗವಾಗಿ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರ ಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ. ಇದರ ದಿವ್ಯ ಸಾನ್ನಿಧ್ಯವನ್ನು ಪರಮ ಪೂಜ್ಯ ಶ್ರೀ ಬಸವಾನಂದ ಸ್ವಾಮೀಜಿ, ಹೂವಿನ ಹಡಗಲಿಯ ಶ್ರೀ ಅಭಿನವ ಹಾಲೇಶ ಸ್ವಾಮಿಜಿ ವಹಿಸಲಿದ್ದು, ಇದರ ಸಮ್ಮುಖವನ್ನು ಬಳೋಬಾಳನ ಬಸವಯೋಗ ಮಂಟಪದ ಪೂಜ್ಯ ನೀಲಾಂಬಿಕೆ ತಾಯಿ, ಸುಗುಣಾತಾಯಿ, ಧೂಪದಾಳನ ಸಂಗನಬಸವ ಸ್ವಾಮಿಗಳು ವಹಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಶಂಕರ ಬಿದರಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ, ಧಾರವಾಡ ಬಿಇಒ ಎಸ್.ಎಂ. ಹುಡೇದಮನಿ, ಧಾರವಾಡ ಗ್ರಾಮೀಣ ಬಿಇಒ ವಿದ್ಯಾ ನಾಡಗೇರ ಆಗಮಿಸಲಿದ್ದಾರೆ. ಅಂಕಣಕಾರ ಡ್ಯಾನಿ ಪರೇರಾ ಅವರು ಉಪನ್ಯಾಸ ನೀಡಲಿದ್ದು, ಇದೇ ವೇಳೆ ದಾಸ್ತಿಕೊಪ್ಪದ ಮಹಾದೇವಪ್ಪ ವರದಾನಿ, ದಾಸ್ತಿಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಮೆಣಸಿನಕಾಯಿ, ಗುತ್ತಿಗೆದಾರ ಬಾಬು ಅಂಚಟಗೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಇದರ ದಾಸೋಹ ಸೇವೆಯನ್ನು ಪಾಂಡವಪುರದ ಉಪನ್ಯಾಸಕರಾದ ಲತಾ ಹಾಗೂ ಮಹದೇವಯ್ಯ ಅವರು ವಹಿಸಿಕೊಂಡಿದ್ದಾರೆ. ಶ್ರೀ ಗುರು ಬಸವ ಮಹಾಮನೆಯ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾಸಿಕ ಶಿವಾನುಭವಗೋಷ್ಠಿಯನ್ನು ಯಶಸ್ವಿಗೊಳಿಸಬೇಕು ಎಂದು ಮಹಾಮನೆಯ ಪ್ರಕಟಣೆ ತಿಳಿಸಿದೆ. ಶ್ರೀಗಳಿಂದ 58ನೇ ಬಾರಿಗೆ ರಕ್ತದಾನ: ಶ್ರೀ ಗುರು ಬಸವ ಮಹಾಮನೆಯ ಪರಮ ಪೂಜ್ಯ ಬಸವಾನಂದ ಸ್ವಾಮೀಜಿಗಳು ಈ ವರೆಗೆ ಒಟ್ಟು 57 ಬಾರಿ ರಕ್ತದಾನ ಮಾಡುವ ಮೂಲಕ ರಕ್ತದಾನದ ಮಹತ್ವ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಈ ಬಾರಿಯೂ ತಮ್ಮ ಜನ್ಮದಂದು 58ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಯುವ ಸಮುದಾಯಕ್ಕೆ ಪ್ರೇರಣೆಯಾಗಲಿದ್ದಾರೆ. ಈ ಹಿನ್ನಲೆಯಲ್ಲಿ ಯುವಕ-ಯುವತಿಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ರಕ್ತದಾನ ಶಿಬಿರಕ್ಕೆ ಕೈ ಜೋಡಿಸಬೇಕು ಎಂದು ಬಸವಾನಂದ ಶ್ರೀಗಳು ಕರೆ ನೀಡಿದ್ದಾರೆ. ಶಿಬಿರವನ್ನು ಎಸ್‍ಡಿಜೆಸಿ ಮೆಮೋರಿಯಲ್ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ ನಡೆಸಿಕೊಡಲಿದ್ದಾರೆ. ಬಾಲಪ್ರತಿಭೆಯಿಂದ ಮನರಂಜನೆ ಕಾರ್ಯಕ್ರಮ: ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್‍ನಲ್ಲಿ ಜನಮನ ಸೊರೆಗೊಂಡ ಬಾಲ ಪ್ರತಿಭೆ ಶರ್ವರಿ ವೀರಭದ್ರಪ್ಪ ಹುಬ್ಬಳ್ಳಿ ಇವರಿಂಧ ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾಮನೆ ಆಡಳಿತ ಮಂಡಳಿ ತಿಳಿಸಿದೆ.