ಧಾರವಾಡದಿಂದ ಬೆಳಗಾವಿಯವರೆಗೆ ಕರ್ನಾಟಕ ವಿಕಾಸ ಯಾತ್ರೆ: ೨೦೧೮ರಲ್ಲಿ ಜನತೆಯ ಆಶೀವಾದಿಂದ ಜೆಡಿಎಸ್ ಅಧಿಕಾರಕ್ಕೆ : ಕುಮಾರಸ್ವಾಮಿ
Date : 2017-11-14 SHARE
ಧಾರವಾಡ : ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಕರ್ನಾಟಕ ವಿಕಾಸ ಯಾತ್ರೆ ಮಂಗಳವಾರ ಬೆಳಗ್ಗೆ ನರೇಂದ್ರ ಬೈ ಪಾಸ್ ನಿಂದ ಆರಂಭಗೊಂಡಿತು. ಈ ಯಾತ್ರೆ ಬೆಳಗಾವಿಯ ಸುವರ್ಣ ಸೌಧದವರೆಗೆ ನಡೆಯಲಿದ್ದು, ಅಲ್ಲಿ ಬೃಹತ್ ಸಮಾವೇಶವಾಗಿ ಮಾರ್ಟಾಗಲಿದೆ. ವಿಶೇಷ ಬಸ್ ಮೂಲಕ ಯಾತ್ರೆ ಆರಂಭಿಸಿದ ಕುಮಾರಸ್ವಾಮಿ ಅವರು ಮಾತನಾಡಿ, ಬೆಳಗಾವಿಯ ಅಧವೇಶನದ ಕಲಾಪ ಸುಗಮವಾಗಿ ನಡೆಸಲು ಎಲ್ಲ ಪಕ್ಷದ ಶಾಸಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ಬೇಡಿಕೆಗೆ ಸದನ ಬಲಿಯಾಗದಿರಲಿ ಎಂದ ಅವರು ಉತ್ತರ ಕರ್ನಾಟಕದ ಜಲ್ವಂತ ಸಮಸ್ಯೆಗಳ ನಿವಾರಣೆಯ ಹಿನ್ನೆಲೆಯಲ್ಲಿ ಸದನ ಸುಗಮವಾಗಿ ನಡೆಯಬೇಕು ಎಂದರು. ಅಲ್ಲದೆ, ನಾಡಿನ ಜನರು ಆಶೀರ್ವಾದ ಮಾಡಿದರೆ ಜೆಡಿಎಸ್ ಪಕ್ಷ ೨೦೧೮ರಲ್ಲಿ ಅಧಿಕಾರಕ್ಕೆ ಬರಲಿದೆ. ಆ ನಿಟ್ಟಿನಲ್ಲಿ ರಾಜ್ಯದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ವಿಕಾಸ ಯಾತ್ರೆ ಕೈಗೊಳ್ಳಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ, ನವಲಗುಂದ ಶಾಸಕ ಎನ್. ಹೆಚ್. ಕೋನರಡ್ಡಿ, ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.