BREAKING NEWS(click on the news)----------
  • ಕಂಬಾರ, ಕಾರ್ನಾಡ್ ಭಾವಚಿತ್ರಕ್ಕೆ ಪೂಜೆ, ಮಾಲೆ ಹಾಕಿ ಯಡವಟ್ಟು ಮಾಡಿದ ಗ್ರಂಥಾಲಯ ಇಲಾಖೆ


    Date : 2017-11-14 SHARE

    ಧಾರವಾಡ: ಇಲ್ಲಿನ ಕಲಾಭವನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಗ್ರಂಥಾಲಯ ಸಪ್ತಾಹದಲ್ಲಿ ಜೀವಂತವಿರುವ ಸಾಹಿತಿಗಳ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ, ಪೂಜೆ ಸಲ್ಲಿಸುವ ಮೂಲಕ ಗ್ರಂಥಾಲಯ ಇಲಾಖೆ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಈ ಅಚಾತುರ್ಯ ನಡೆದಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಗಿರೀಶ ಕಾರ್ನಾಡ್ ಹಾಗೂ ಚಂದ್ರಶೇಖರ ಕಂಬಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಲಾಗಿತ್ತು. ಇದನ್ನು ಸ್ವತಃ ಪ್ರಾಥಮಿಕ ಹಾಗೂ ಗ್ರಂಥಾಲಯ ಸಚಿವ ತನ್ವೀರ್ ಸೇಠ್ ಕಣ್ಣಾರೆ ಕಂಡು ದಂಗಾಗಿದ್ದಾರೆ. ಅಲ್ಲದೆ ಕೂಡಲೇ ಅಧಿಕಾರಿಗಳನ್ನು ಕರೆದು ಯಡವಟ್ಟು ಸರಿಪಡಿಸಿದ್ದಾರೆ. ದಿವಂಗತ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಅನಂತಮೂರ್ತಿ ಅವರ ಭಾವಚಿತ್ರಗಳ ಜೊತೆಗೆ ಜೀವಂತ ಸಾಹಿತಿಗಳಿಗೂ ಮಾಲೆ ಹಾಕಿ ಯಡವಟ್ಟು ಮಾಡಲಾಗಿತ್ತು. ಬಳಿಕ ಸಚಿವರ ಆದೇಶದ ಮೇರೆಗೆ ಎಚ್ಚೆತ್ತ ಅಧಿಕಾತಿಗಳು ಮಾಲೆ ತೆಗೆದು ಹಾಕಿದ್ದರೂ ಕೂಡ ವಿಭೂತಿ ಹಾಗೂ ಕುಂಕುಮ ಹಾಗೆಯೇ ರಾರಾಜಿಸುತಿತ್ತು.