BREAKING NEWS(click on the news)----------
  • ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರಕ್ಕೆ ಹನ್ನೆರಡು ವರ್ಷದ ಬಾಲಕಿ ಬಲಿ


    Date : 2017-11-14 SHARE

    ಧಾರವಾಡ : ಇಲ್ಲಿಯ ಹೆಬ್ಬಳ್ಳಿ ಅಗಸಿಯ ಗಣಪತಿ ಗುಡಿ ಓಣಿಯ ನಿವಾಸಿಯಾಗಿರುವ ವಿಷ್ಣು ಜಾಧವ ಹಾಗೂ ಚೈತ್ರಾ ಜಾಧವ ಅವರ ಪುತ್ರಿ ವೈಷ್ಣವಿ ಜಾಧವ (೧೨) ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದಿಂದಾಗಿ ಚಿಕಿತ್ಸೆ ಫಲಿಸದೆ ವಿಧಿವಶವಾಗಿದ್ದಾಳೆ. ವೈಷ್ಣವಿ ಧಾರವಾಡದ ಪ್ರಜೆಂಟೇಶನ್ ಕಾನ್ವೆಂಟ್ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಇವಳು ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದಳು. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಇಕೆಯ ಚಿಕಿತ್ಸೆಗಾಗಿ ಪೋಷಕರು ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸಗೆ ರವಾನಿಸಲಾಗಿತ್ತು. ಹಲವು ಖಾಸಗಿ ಆಸ್ಪತ್ರೆ ಸುತ್ತಾಡಿದ ಬಳಿಕ ಕಿಮ್ಸ್ ಗೆ ಹೋದ ಬಾಲಕಿ ಅಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ್ದರಿಂದ ಸೂಕ್ತ ಚಿಕಿತ್ಸೆ ಸಿಗದೆ ತಮ್ಮ ಮಗಳ ಸಾವು ಸಂಭವಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಇಂದು ಮಕ್ಕಳ ದಿನಾಚರಣೆ ಪ್ರಯುಕ್ತ ಬಾಲಕಿ ಓದುತ್ತಿದ್ದ ಪ್ರೆಜೆಂಟೇಶನ್ ಕಾನ್ವೆಂಟ್ ಶಾಲೆ ರಜೆ ಘೋಷಿಸಿದಾಗ ಬಾಲಕಿ ಸಾವು ಬೆಳಕಿಗೆ ಬಂದಿದೆ.