ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯ ದಕ್ಷತೆ ರಾಜಕೀಯ ಸೇರಲು ಪ್ರೇರಣೆ : ಬಸವಾನಂದ ಸ್ವಾಮೀಜಿ
Date : 2017-11-14 SHARE
ಧಾರವಾಡ : ಕಲಘಟಗಿ ವಿಧಾನ ಸಭಾ ಕ್ಷೇತ್ರವೂ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರ ಪಾದವಿಟ್ಟು ನಡೆದಾಡಿದ ದಿವ್ಯ ಕ್ಷೇತ್ರವಾಗಿದ್ದು, ಇದನ್ನು ಅದಕ್ಷ ಹಾಗೂ ಸ್ವಾರ್ಥ ರಾಜಕಾರಣಿಗಳು ಹಾಳುಗೆಡವಿದ್ದಾರೆ. ಹೀಗಾಗಿ ಕ್ಷೇತ್ರವೂ ಸಮೃದ್ಧವಾಗಿ ಅಭಿವೃದ್ಧಿ ಹೊಂದುವ ಅವಕಾಶವಿದ್ದರೂ, ಹಿಂದುಳಿಯಲು ಕಾರಣಿಕರ್ತರಾಗಿದ್ದಾರೆ ಎಂದು ಶ್ರೀ ಗುರು ಬಸವ ಮಹಾಮನೆಯ ಪರಮ ಪೂಜ್ಯ ಶ್ರೀ ಬಸವಾನಂದ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ಮನಗುಂಡಿಯ ಚನ್ನಯ್ಯನ ಗಿರಿಯಲ್ಲಿರುವ ಶ್ರೀ ಗುರುಬಸವ ಮಹಾಮನೆಯಲ್ಲಿ ಜರುಗಿದ 113ನೇ ಮಾಸಿಕ ಶಿವಾನುಭವಗೋಷ್ಠಿ ಅಂಗವಾಗಿ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರ ಸ್ಮರಣೋತ್ಸವ ಉದ್ದೇಶಿಸಿ ಅವರು ಮಾತನಾಡಿದರು. 2018ರ ವಿಧಾನ ಸಭಾ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರವನ್ನು ಇಡೀ ಕರುನಾಡು ಗಮನಿಸುವಂತಾಗಲಿದೆ. ಶೇ. 80ಕ್ಕಿಂತ ಹೆಚ್ಚಿನ ಮತದಾನ ಮಾಡುವ ಮೂಲಕ ಕಲಘಟಗಿ ಕ್ಷೇತ್ರವನ್ನು ದೇಶದ ಮಾಧ್ಯಮಗಳ ಗಮನವನ್ನು ಸೆಳೆಯುವಂತಹ ಕೆಲಸ ಮಾಡೋಣ ಎಂದರು. ನಮ್ಮ ಧರ್ಮಗುರು ಬಸವಣ್ಣನವರು ಪ್ರಧಾನಮಂತ್ರಿ ಆಗಿದ್ದರಿಂದ ಅಷ್ಟೆಲ್ಲಾ ಕೆಲಸ ಮಾಡಲು ಸಾಧ್ಯವಾಯಿತು. ರಾಜಕೀಯ ಕ್ಷೇತ್ರ ಕೆಟ್ಟದಲ್ಲ. ಕೆಲವು ಸ್ವಾರ್ಥ ರಾಜಕಾರಣಿಗಳು ಭ್ರಷ್ಟಾಚಾರ, ಪಕ್ಷಪಾತ, ವಂಶವಾಹಿ ರಾಜಕಾರಣ ಮಾಡುವುದರ ಮೂಲಕ ನಮ್ಮ ದೇಶದ ರಾಜಕೀಯವನ್ನು ಕೆಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿ ಇನ್ನೂ ಮುಂದೆ ದೇಶ ಭಕ್ತರು, ತ್ಯಾಗಿಗಳು, ಯೋಗಿಗಳು, ರಾಷ್ಟ್ರದ ಅಭಿವೃದ್ಧಿಗಾಗಿ ರಾಜಕಾರಣಕ್ಕೆ ಬರಬೇಕು. ಈ ನಿಟ್ಟಿನಲ್ಲಿ ನಾನು ಕೂಡ ರಾಜಕೀಯ ಶುದ್ಧಿಕರಣಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿಶ್ಚಿಯಿಸಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉತ್ಕಟ ದೇಶಭಕ್ತಿ, ಕಾರ್ಯಕ್ಷಮತೆ ರಾಜಕೀಯಕ್ಕೆ ಬರಲು ಪ್ರೇರಣೆಯಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಗದ್ದುಗೆ ಎರುತ್ತದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಅಭಿವೃದ್ಧಿಗೆ ಸಹಕಾರವಾಗುತ್ತದೆ ಎಂದು ಬಸವಾನಂದ ಸ್ವಾಮೀಜಿ ಹೇಳಿದರು. ಇದರ ದಿವ್ಯ ಸಾನ್ನಿಧ್ಯ ವಹಿಸಿ ಹೂವಿನ ಹಡಗಲಿಯ ಶ್ರೀ ಅಭಿನವ ಹಾಲೇಶ ಸ್ವಾಮಿಜಿ ಮಾತನಾಡಿ, ಕಲಘಟಗಿ ಕ್ಷೇತ್ರವೂ ಆರೋಗ್ಯ, ಶಿಕ್ಷಣ, ಪರಿಸರ ಸೇರಿದಂತೆ ಎಲ್ಲ ರಂಗಗಳಲ್ಲಿ ಹಿಂದುಳಿದಿದ್ದು, ವೋಟಿಗಾಗಿ ನೋಟು ಪಡೆದರೆ ಕ್ಷೇತ್ರ ಹಿಂದುಳಿಯುತ್ತದೆ. ಹೀಗಾಗಿ ನೋಟು ನೀಡುವವರಿಗೆ ವೋಟು ನೀಡಬೇಕು ಬದಲಿಗೆ ಸರಿಯಾದ ಪಾಠ ಕಲಿಸಿ ಎಂದು ಸಲಹೆ ನೀಡಿದರು. ಇದರ ಸಮ್ಮುಖವನ್ನು ಬಳೋಬಾಳನ ಬಸವಯೋಗ ಮಂಟಪದ ಪೂಜ್ಯ ನೀಲಾಂಬಿಕೆ ತಾಯಿ, ಸುಗುಣಾತಾಯಿ, ಧೂಪದಾಳನ ಸಂಗನಬಸವ ಸ್ವಾಮಿಗಳು ವಹಿಸಿದ್ದರು. ಇದೇ ವೇಳೆ ದಾಸ್ತಿಕೊಪ್ಪದ ಮಹಾದೇವಪ್ಪ ವರದಾನಿ, ದಾಸ್ತಿಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಮೆಣಸಿನಕಾಯಿ, ಗುತ್ತಿಗೆದಾರ ಬಾಬು ಅಂಚಟಗೇರಿ ಅವರನ್ನು ಸನ್ಮಾನಿಸಿ