ಗ್ರಂಥಾಲಯಗಳಿಗೆ ಶೀಘ್ರದಲ್ಲೇ ಹೊಸ ಸ್ವರೂಪ ಸಚಿವ ತನ್ವೀರ್ ಸೇಠ್
Date : 2017-11-14 SHARE
ಧಾರವಾಡ: ವೃತ್ತಿಪರ ಶಿಕ್ಷಣ ದುಬಾರಿಯಾಗಿರುವ ಕಾಲದಲ್ಲಿ ಗ್ರಂಥಾಲಯಗಳಲ್ಲಿಯೇ ಆ ಪುಸ್ತಕ ದೊರೆಯುವಂತೆ ಮಾಡಲಾಗಿದೆ. ಡಿಜಿಟಲ್ ತಂತ್ರಜ್ಞಾನ ಅಳವಡಿಸಿ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತಿದೆ ಎಂದು ಪ್ರಾಥಮಿಕ ಶಿಕ್ಷಣ ಹಾಗೂ ಗ್ರಂಥಾಲಯ ಸಚಿವ ತನ್ವೀರ ಸೇಠ್ ತಿಳಿಸಿದರು. ಅವರು ಧಾರವಾಡದ ಕಲಾಭವನದಲ್ಲಿ ೨೦೧೭ನೇ ಸಾಲಿನ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಹಾಗೂ ಸಿಬ್ಬಂದಿ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ರಾಜ್ಯದ ೬೬೦ ಗ್ರಂಥಾಲಯ ಗಳಿಗೆ ಶೀಘ್ರದಲ್ಲೇ ಹೊಸ ಸ್ವರೂಪ ನೀಡಲಾಗುತ್ತದೆ. ಆ ಮೂಲಕ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರ ಸ್ನೇಹಿಯನ್ನಾಗಿ ಮಾಡಲಾಗುವುದು ಎಂದರು. ೧೫೦ ಹೊಸ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದ್ದು, ಪುಸ್ತಕ ಖರೀದಿಗೆ ಹಳೆಯ ೧೯ ಕೋಟಿ ಬಾಕಿ ಹಣ ಬಿಡುಗಡೆ ಮಾಡಲಾಗಿದೆ. ಇನ್ನೂ ಅಗತ್ಯ ನೆರವು ನೀಡಲಾಗುವುದು. ಆದರೆ ಕೇಂದ್ರ ಸರಕಾರ ಕಳೆದ ಮೂರು ವರ್ಷಗಳಿಂದ ನಿರ್ವಹಣೆ ವೆಚ್ಚ ಕಡಿತಗೊಳಿಸಿ ದೆ. ಹೀಗಾಗಿ ಸಾಕಷ್ಟು ತೊಂದರೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಟಿ ಮಯೂರಿ, ಕೆಪಿಸಿಸಿ ಸದಸ್ಯ ದೀಪಕ ಚಿಂಚೋರೆ, ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ ಹೊಸಮನಿಸಿಇಒ ಆರ್ ಸ್ನೇಹಲ್ ಉಪಸ್ಥಿತರಿದ್ದರು.