ಅಮೃತ ದೇಸಾಯಿ ಅವರಿಗೆ 40ನೇ ಹುಟ್ಟುಹಬ್ಬ ಸಂಭ್ರಮ * ಬಿಜೆಪಿಯ ಕಾರ್ಯಕರ್ತರಿಂದ ಹುಟ್ಟುಹಬ್ಬ ಆಚರಣೆ ಧಾರವಾಡ ಜಿಲ್ಲಾಸ್ಪತ್ರೆಯ ನೂರಾರು ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
Date : 2017-11-16 SHARE
ಧಾರವಾಡ : ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ-71ರ ಬಿಜೆಪಿಯ ಯುವ ಮುಖಂಡ ಅಮೃತ ದೇಸಾಯಿಯವರ 40ನೇ ಹುಟ್ಟುಹಬ್ಬದ ಅಂಗವಾಗಿ ಅವರ ಅಮೃತ ದೇಸಾಯಿ ಗೆಳೆಯರ ಬಳಗದ ವತಿಯಿಂದ ಧಾರವಾಡ ಜಿಲ್ಲಾಸ್ಪತ್ರೆಯ ನೂರಾರು ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಗುರುವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಗೆಳೇಯರ ಬಳಗದ ಸದಸ್ಯರು ನೂರಾರು ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ, ಬೇಗನೇ ಗುಣಮುಖರಾಗಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅಮೃತ ದೇಸಾಯಿ ಗೆಳೆಯರ ಬಳಗದ ಮುಖಂಡ ಹಾಗೂ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಮಹೇಶ ಯಲಿಗಾರ, ಧಾರವಾಡ ಎಪಿಎಂಸಿ ಸದಸ್ಯ ಬಸವರಾಜ ಹೊಸುರ, ಮುಖಂಡರಾದ ಸಂತೋಷ ಗೌಡ ಪಾಟೀಲ, ವಿನಾಯಕ ನಡುವಮನಿ ನಾಗರಾಜ ಪಾಟೀಲ, ಜಾಫರ್ ಖಾನ್ ತಡಕೋಡ, ಜಿಲ್ಲಾಸ್ಪತ್ರೆಯ ಪ್ರಭಾರಿ ಮುಖ್ಯಸ್ಥ ಡಾ. ನಾಡಗೌಡ ಹಾಗೂ ಅಮೃತ ದೇಸಾಯಿ ಗೆಳಯರ ಬಳಗದ ಇತರರು ಉಪಸ್ಥಿತರಿದ್ದರು.