ನೇಚರ್ ಫಸ್ಟ್ ಇಕೋ ವಿಲೇಜಿನಲ್ಲಿ ವಿಭಿನ್ನ ಮಕ್ಕಳ ದಿನಾಚರಣೆ
Date : 2017-11-14 SHARE
ಧಾರವಾಡ : ಇಲ್ಲಿಯ ನೇಚರ ರಿಸರ್ಚ ಸೆಂಟರ್ ವತಿಯಿಂದ ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜಿನಲ್ಲಿ ಮಕ್ಕಳ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು. 120ಕ್ಕೂ ಹೆಚ್ಚು ಬಡ ಮಕ್ಕಳಿಗೆ ನೇಚರ್ ಫಸ್ಟ್ ಇಕೋ ವಿಲೇಜಿನಲ್ಲಿ ಉಚಿತ ಪ್ರವೇಶದ ಜೊತೆಗೆ ಅವರಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟದ ಜೊತೆಗೆ ಪರಿಸರ ಪಾಠ, ನೈಸರ್ಗಿಕ ನೋಟ ಸೇರಿದಂತೆ ವಿಭಿನ್ನ ಆಯಾಮಗಳ ಕುರಿತು ಪರಿಚಯ ಮಾಡಿಕೊಡಲಾಯಿತು. ಈ ವೇಳೆ 'ಮಕ್ಕಳು ಮತು ಪರಿಸರ' ಎಂಬ ವಿಶೇಷ ಪ್ರಾತ್ಯಕ್ಷಿಕಾ ಉಪನ್ಯಾಸ ಕಾರ್ಯಕ್ರಮ ಜರುಗಿತು. ನೇಚರ್ ರಿಸರ್ಚ ಸೆಂಟರಿನ ಅಧ್ಯಕ್ಷರಾದ ಪಿ.ವಿ ಹಿರೇಮಠ ಅವರು ಮಾತನಾಡಿ, ಎಳೆಯ ಮಕ್ಕಳಿಗೆ ಪರಿಸರದ ಬಗ್ಗೆ ಜಾಗ್ರೃತಿ ಮೂಡಿಸುವುದಕ್ಕಾಗಿಯೇ ಇಕೋ ವಿಲೇಜ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಈ ಮಕ್ಕಳ ದಿನಾಚರಣೆಯನ್ನು, ಮಕ್ಕಳು ಪರಿಸರದೊಂದಿಗೆ ಆಟ, ಪಾಠ ನಲಿದಾಟದೊಂದಿಗೆ ಕಳೆಯುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂದೆಯೂ ಸಹಿತ ಇಂತಹ ಅನೇಕ ಕಾರ್ಯಕ್ರಮಗಳನ್ನು ತಮ್ಮ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪರಿಸರ ಸ್ನೇಹಿಗಳಾದ ಡಾ. ಪ್ರಕಾಶ ಭಟ, ಡಿ.ಎಮ್ ಹಿರೇಮಠ, ಶಿವಾನಂದ ಭಾವಿಕಟ್ಟಿ, ಪಕ್ಷಿತಜÐ ಆರ್.ಜಿ. ತಿಮ್ಮಾಪೂರ, ನೇಚರ್ ರಿಸರ್ಚ ಸೆಂಟರನ ಚಂದ್ರಶೇಖರ ಭೈರಪ್ಪನವರ, ಧೀರಜ ವೀರನಗೌಡರ, ಪ್ರಕಾಶ ಗೌಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.