BREAKING NEWS(click on the news)----------
  • ಆಟೋರಿಕ್ಷಾ ಕಳ್ಳನ ಬಂಧನ : ಉಪನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆ


    Date : 2017-11-15 SHARE

    ಧಾರವಾಡ: ಆಟೋ ರಿಕ್ಷಾ ಕಳ್ಳತನ ಮಾಡಿದ್ದ ಓರ್ವನನ್ನು ಬಂಧಿಸುವಲ್ಲಿ ಇಲ್ಲಿನ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ‌. ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರದ ಅಬ್ದುಲ ರಹೀಂ ಇಮಾಮಜಾಫರ್ ಬೆಂಗಳೂರಿ ಎಂಬುವನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಕಳೆದ ತಿಂಗಳ ೨೬ ರಂದು ರಾತ್ರಿ ಧಾರವಾಡದ ಮಾಳಾಪೂರದ ಅಕ್ಕಿ ಓಣಿಯ ಆಕಾಶ ಅಪ್ಪಣ್ಣ ಎಂಬುವವರ ಆಟೋ ರಿಕ್ಷಾ ಕಳ್ಳತನ ಮಾಡಿದ್ದ. ಬಳಿಕ ಆಕಾಶ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಆರೋಪಿ ಅಬ್ದುಲ ರಹೀಂನನ್ನು ಹಳಿಯಾಳ ರಸ್ತೆಯಲ್ಲಿನ ಹೊಯ್ಸಳ ನಗರದಲ್ಲಿ ಆಟೋದಲ್ಲಿ ಹೋಗುತ್ತಿದ್ದಾಗ ೧ ಲಕ್ಷ ರೂಪಾಯಿ ಮೌಲ್ಯದ ಆಟೋರಿಕ್ಷಾ ಸಮೇತ ಬಂಧಿಸಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಮೋತಿಲಾಲ ಪವಾರ, ಸಿಬ್ಬಂದಿಗಳಾದ ಗುರು ಒಡೆಯರ, ಕೆ.ಎಂ.ಡೊಕ್ಕನವರ, ಆರ್.ಎಚ್.ಬಡ್ನಿ, ಮಲ್ಲೇಶಿ ಲಮಾಣಿ, ನಾಗರಾಜ ಬೆಳವಡಿ, ಅನಂತ ಆಲೂರ, ತನಿಖೆ ಕೈಕೊಂಡಿದ್ದರು. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.