BREAKING NEWS(click on the news)----------
  • ಚಿಕಿತ್ಸೆಗಾಗಿ ಬಂದ ರೋಗಿಯ ಪತ್ನಿಯ ಮೇಲೆ ಹಲ್ಲೆ ಮಾಡಿದ ವೈದ್ಯ : ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಅಮಾನವೀಯತೆ


    Date : 2017-11-15 SHARE

    ಧಾರವಾಡ : ವೈದ್ಯರೊಬ್ಬರು ಚಿಕಿತ್ಸೆಗಾಗಿ ಬಂದ ರೋಗಿಯ ಪತ್ನಿಯ ಮೇಲೆ ಹಲ್ಲೆ ಮಾಡಿದಲ್ಲದೆ, ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಅಮಾನವೀಯತೆ ಮೆರೆದಂತಹ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಶ್ರೇಯಾ ಆಸ್ಪತ್ರೆಯ ವೈದ್ಯ ಡಾ. ವೈ,ಎನ್. ಇರಕಲ್ ಎಂಬುವವರೇ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ವೈದ್ಯರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲ ಹೊಂಗಲದ ತಾಲೂಕಿನ ಅಂಬಡಗಟ್ಟಿ ಗ್ರಾಮದ ನಿವಾಸಿಯಾಗಿರುವ ನಿವೃತ್ತ ಯೋಧ ಬಸಯ್ಯ ರುದ್ರಯ್ಯ ಅಡಿವೆಪ್ಪನವರಮಠ ಅವರು ಮೂಲ ವ್ಯಾಧಿ ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮೂರು ದಿನಗಳು ಕಳೆದಿವೆ. ನಿನ್ನೆ ರಾತ್ರಿ ಬಸಯ್ಯ ಅವರು ರಕ್ತ ಸೋರಿಕೆಯಿಂದಾಗಿ ನರಳುತ್ತಿದ್ದರು. ಈ ಕುರಿತು ಅವರ ಪತ್ನಿ ಕಸ್ತೂರೆವ್ವ ವೈದ್ಯರ ಗಮನಕ್ಕೆ ತಂದಾಗ ವೈದ್ಯರು ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದು ಬಿಟ್ಟು ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ನನ್ನ ಮನಸ್ಸಿಗೆ ಬಹಳ ಬೇಸರವಾಗಿದೆ. ಹಲ್ಲೆ ವೇಳೇ ಯಾರೊಬ್ಬರು ಇರಲಿಲ್ಲ. ಹೀಗಾಗಿ ನಾವು ಸುಮ್ಮನಾಗಿದ್ದೇವು ಎಂದು ಹಲ್ಲೆಗೊಳಗಾದ ಬಸಯ್ಯ ಅವರ ಪತ್ನಿ ಕಸ್ತೂರೆವ್ವ ಆರೋಪಿಸಿದರು. ಹಣ ನೀಡಿ ಚಿಕಿತ್ಸೆ ಪಡೆಯಲು ಬಂದರೆ ಈ ರೀತಿ ಹಲ್ಲೆ ಮಾಡುವುದು ನ್ಯಾಯವೇ ಎಂದು ನಿವೃತ್ತ ಯೋಧ ಬಸಯ್ಯ ಅಡಿವೆಪ್ಪನವರಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೋಗಿಯ ಚಿಕಿತ್ಸೆಗೆ ಸ್ಪಂದಿಸಬೇಕಾದ ವೈದ್ಯರೇ ಈ ರೀತಿ ಸಿಡಿಮಿಡಿಗೊಂಡು ಹಲ್ಲೆ ಮಾಡಿದರೆ ಹೇಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿಯ ರೈತ ಮೋರ್ಚಾ ಅಧ್ಯಕ್ಷ ಅರವಿಂಧ ಏಗನಗೌಡರ ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಭಂದಿಯನ್ನು ತರಾಟೆಗೆ ತೆಗೆದುಕೊಂಡರು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೇಯಾ ಆಸ್ಪತ್ರೆಯ ಮುಖ್ಯಸ್ಥ ಡಾ. ಸತೀಶ ಇರಕಲ್ ಅವರು, ತಮ್ಮ ವೈದ್ಯರು ರೋಗಿಯ ಸಂಬಂಧಿಕರಿಗೆ ಕರೆದು ತಿಳಿ ಹೇಳಿದ್ದಾರೆ. ಹೊರತು ಯಾವುದೇ ರೀತಿಯ ದೈಹಿಕ ಹಲ್ಲೆ ಮಾಡಿಲ್ಲ. ವೈದ್ಯರ ಮುಷ್ಕರದಿಂದಾಗಿ ಹೊರ ರೋಗಿಯ ಸೇವೆ ಸ್ಥಗಿತಗೊಳಿಸಲಾಗಿದೆ. ಆದರೂ ನಾವು ತುರ್ತು ಚಿಕಿತ್ಸೆ ನೀಡಿ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದೇವೆ. ರೋಗಿಯ ಸಂಬಂಧಿಕರು ಯಾವ ಉದ್ದೇಶಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ ತಮಗಂತೂ ತಿಳಿಯುತ್ತಿಲ್ಲ.ಅಂತಹ ಘಟನೆ ತಮ್ಮ ಆಸ್ಪತ್ರೆಯಲ್ಲಿ ನಡೆದಿಲ್ಲ ಎಂಧು ತಿಳಿಸಿದರು. ಒಟ್ಟಿನಲ್ಲಿ ವೈದ್ಯರಿಂದ ಹಲ್ಲೆಗೊಳಗಾದ ನಿವೃತ್ತ ಯೋಧ ಬಸಯ್ಯ ರುದ್ರಯ್ಯ ಅಡಿವೆಪ್ಪನವರಮಠ ಹಾಗೂ ಅವರ ಪತ್ನಿ ಕಸ್ತೂರೆವ್ವ ಅವರ ಕಣ್ಣೀರು ಧಾರೆ ಹಲವರ ಮನಕಲುಕಿದ್ದು ಸುಳ್ಳಲ್ಲ