BREAKING NEWS(click on the news)----------
  • ವಿಶ್ವ ಬ್ಯಾಂಕ್ ನೆರವಿನಲ್ಲಿ 24*7 ಕುಡಿಯುವ ನೀರು ಕಾಮಗಾರಿ ಅನುಷ್ಠಾನ : ಸಚಿವ ವಿನಯ್ ಕುಲಕರ್ಣಿ


    Date : 2017-11-18 SHARE

    ಧಾರವಾಡ : ಮರಾಠಾ ಕಾಲನಿಯಿಂದ ಎಪಿಎಮ್‍ಸಿವರೆಗೆ 24*7 ಕುಡಿಯುವ ನೀರು ಪೂರೈಸುವ ಕಾಮಗಾರಿಯನ್ನು ವಿಶ್ವ ಬ್ಯಾಂಕ್ ನೆರವಿನಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ಗಣಿ, ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿ ಹೇಳಿದರು. ನಗರದ ಸಕ್ರ್ಯೂಟ್ ಹೌಸ್‍ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಠ ಕಾಲನಿಯಿಂದ ಮುರುಘಾಮಠದ ಎಪಿಎಮ್‍ಸಿವರೆಗಿನ 2.5 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಕೆಲಸ ಪ್ರಗತಿಯಲ್ಲಿದ್ದು, ಸದ್ಯದಲ್ಲಿಯೇ ಆ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿಗೆ 23 ಕೋಟಿ ಖರ್ಚು ಮಾಡಲಾಗಿದ್ದು, ರಸ್ತೆಯ ಬದಿಯಲ್ಲಿ ವಾಟರಿಂಗ್, ಕೇಬಲ್ ಅಳವಡಿಕೆ, ಕೆಇಬಿ ಲೈನ್ ಅಳವಡಿಕೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈ ರಸ್ತೆಯ ಪಕ್ಕದಲ್ಲಿ 8 ಅಡಿ ಪಾದಚಾರಿ ರಸ್ತೆ ನಿರ್ಮಾಣ ಮಾಡಲಾಗುವುದು ಕಾಮಗಾರಿಗೆಯ ವಿಸ್ತರಣೆಯಲ್ಲಿ ಜಾಗ ಮತ್ತು ಅಂಗಡಿ ಕಳೆದುಕೊಂಡ ಮಾಲೀಕರಿಗೆ ಸೂಕ್ತ ಪರಿಹಾರದ ವ್ಯವಸ್ಥೆ ಒದಗಿಸಲಾಗುವುದು ಎಂದರು. ಶಿವಾಜಿ ವೃತ್ತದಿಂದ ಹೆಬ್ಬಳ್ಳಿ ಅಗಸಿವರೆಗಿನ ರಸ್ತೆ ಕಾಮಗಾರಿಗೆ 70 ಕೋಟಿ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವ ಕಳಿಸಲಾಗಿತ್ತು. ಈಗ ಕಾಮಗಾರಿ ವೆಚ್ಚ 80 ಕೋಟಿ ಏರಿಕೆಯಾಗಿದ್ದು 10ಕೋಟಿ ಪೂರಕ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು. ಇನ್ನೂ 3-4 ತಿಂಗಳಲ್ಲಿ ಧಾರವಾಡದ ಹಳೇ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಳಿಸಿ ಹೊಸ ಬಸ್ ನಿಲ್ದಾಣದ ದುರಸ್ಥಿಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.