ಚಾಮರಾಜನಗರದ ರಾಘವೇಂದ್ರಸ್ವಾಮಿ ಮಠದಲ್ಲಿ ಲಕ್ಷ ದೀಪೋತ್ಸವ
Date : 2017-11-18 SHARE
ಚಾಮರಾಜನಗರ: ಇಲ್ಲಿಯ ವಾದಿರಾಜ ನಗರದಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಕಾರ್ತಿಕ ಅಮಾವಾಸ್ಯೆ ಪ್ರಯುಕ್ತ ಲಕ್ಷ ದೀಪೋತ್ಸವ ನಡೆಯಿತು. ಕಾರ್ತಿಕ ಮಾಸದ ಕಡೆಯ ದಿನವಾದ ಶನಿವಾರ ದಂದು ಸಾರ್ವಜನಿಕರು ದೀಪಗಳನ್ನು ಬೆಳಗಿಸಿ ರಾಘವೇಂದ್ರಸ್ವಾಮಿಯ ಸನ್ನಿಧಿಯಲ್ಲಿ ನಮಿಸಿದರು. ಮಠದ ಅಧ್ಯಕ್ಷರಾದ ವಾಸುದೇವರಾವ್ ಮಾತನಾಡಿ, ಆಷಾಢ ಮಾಸದಲ್ಲಿ ಭಗವಂತ ನಿದ್ರೆಯಲ್ಲಿ ಇರುತ್ತಾನೆ. ಕಾರ್ತಿಕ ಮಾಸದಲ್ಲಿ ಭಕ್ತರಿಗೆ ಪೂಜೆಯ ರೂಪದಲ್ಲಿ ದರ್ಶನ ನೀಡುತ್ತಾನೆ ಎನ್ನುವ ಪ್ರತೀತಿ ಇದೆ. ಇನ್ನೊಂದು ಅರ್ಥದಲ್ಲಿ ಹೇಳುವುದೇನೆಂದರೆ ಕಾರ್ತಿಕ ಮಾಸದಲ್ಲಿ ರೈತರು ಬೆಳೆದಿರುವ ಬೆಳೆಗೆ ಕ್ರೀಮಿಕೀಟಗಳಿಂದ ಕೂಡಿರುತ್ತವೆ. ಸಂಜೆಯ ಸಮಯದಲ್ಲಿ ದೀಪಗಳನ್ನು ಹಚ್ಚುವುದರಿಂದ ದೀಪದ ಆಕರ್ಷಣೆಗೆ ಕೀಟಗಳು ನಾಶವಾಗುತ್ತವೆ ಎಂದರು. ಪೂಜಾ ಕಾರ್ಯದಲ್ಲಿ ಅರ್ಚಕರಾದ ಪವನಚಾರ್, ಶ್ರೀಧರಚಾರ್, ಮಠದ ವ್ಯವಸ್ಥಾಪಕ ನಂಜುಂಡಸ್ವಾಮಿ, ಅಣ್ಣಾಜಿ, ರವಿಪ್ರಸಾದ ಗುರೂಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.