BREAKING NEWS(click on the news)----------
  • ಐದು ದಿನಗಳ ನಂತರ ಸೇವೆಗೆ ಹಾಜರಾದ ವೈದ್ಯರು: ಖಾಸಗಿ ಆಸ್ಪತ್ರೆಗಳತ್ತ ಧಾವಿಸಿ ಬಂದ ಜನತೆ


    Date : 2017-11-18 SHARE

    ಧಾರವಾಡ : ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ವಿರೋಧಿಸಿ ರಾಜ್ಯಾದ್ಯಂತ ವೈದ್ಯರು ಆರಂಭಿಸಿದ್ದ ಐದು ದಿನಗಳ ಮುಷ್ಕರಕ್ಕೆ ಶುಕ್ರವಾರ ಸಂಜೆ ತೆರೆ ಬಿದ್ದ ಪರಿಣಾಮ ಶನಿವಾರ ಎಂದಿನಂತೆ ಸೇವೆಗೆ ಹಾಜರಾದ ವೈದ್ಯರು ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಕಾಯಕದಲ್ಲಿ ತೊಡಗಿದ್ದು ಕಂಡು ಬಂತು. ಇದು ರೋಗಿಗಳಿಗೆ ಹಾಗೂ ಅವರ ಸಂಬಂಧಿಕರು ನಿಟ್ಟುಸಿರುವ ಬಿಡುವಂತೆ ಮಾಡಿದೆ. ಕಳೆದ ಐದು ದಿನಗಳಿಂದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿ ಆರೋಗ್ಯ ಹದಗೆಟ್ಟು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದ ಜನರು ಶನಿವಾರ ಬೆಳ್ಳಂಬೆಳಗ್ಗೆಯೇ ಆಸ್ಪತ್ರೆಗಳತ್ತ ಧಾವಿಸುತ್ತಿದ್ದ ದೃಶ್ಯಗಳು ಅಲಲ್ಲಿ ಕಂಡು ಬಂದವು. ಇದು ರೋಗಿಗಳಿಗೆ ಹಾಗೂ ಅವರ ಅವಲಂಬಿತರಿಗೆ ನಿಟ್ಟುಸಿರು ಬಿಡುವಂತೆ ಮಾಡಿತು. ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕಾಗಿ ಕಠಿಣ ಮಸೂದೆ ಮಂಡಿಸಲು ಮುಂದಾಗಿದ್ದರಿಂದ ನಾವು ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯಬೇಕಾಗಿತ್ತು. ಇದರಿಂದಾಗಿ ಸಾಕಷ್ಟು ರೋಗಿಗಳು ನೋವು ಅನುಭವಿಸಿದ್ದಾರೆ. ಅದು ನಮಗೆ ಕೂಡ ಬೇಸರ ತಂದಿದೆ. ಕೊನೆಗೂ ಸರ್ಕಾರ ನಮ್ಮೊಂದಿಗೆ ಮಾತನಾಡಿ, ಕೆಲವು ಮಾರ್ಪಾಡು ಮಾಡಲು ಒಪ್ಪಿಗೆ ಸೂಚಿಸಿದೆ. ಹೀಗಾಗಿ ನಾವು ಎಂದಿನಂತೆ ಸೇವೆ ಹಾಜರಾಗಿದ್ದೇವೆ ಎಂದು ಧಾರವಾಡದ ಹಿರಿಯ ವೃದ್ಯ ಡಾ. ರಾಜನ್ ದೇಶಪಾಂಡೆ ಪ್ರಜಾ ಕಿರಣಗೆ ತಿಳಿಸಿದರು. ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಮಹಾನಗರ ಪಾಲಿಕೆ ಸದಸ್ಯರಾದ ಶೈಲಾ ಕಾಮರಡ್ಡಿ ಹಾಗೂ ಬಾಬುರಾವ್ ಶೇಗುಣಸಿ ಅವರು ಮಾತನಾಡಿ, ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರ ಆರಂಭಿಸಿದ್ದರಿಂದ ರೋಗಿಗಳು ಅಕ್ಷರಶಃ ಪರದಾಡುವಂತಾಗಿತ್ತು. ಇದೀಗ ವೈದ್ಯರು ಹಾಗೂ ರಾಜ್ಯ ಸರ್ಕಾರದ ನಡುವೆ ಸಂಧಾನ ಎರ್ಪಟ್ಟ ಹಿನ್ನಲ್ಲೆಯಲ್ಲಿ ವೈದ್ಯರು ಎಂದಿನಂತೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ತುಸು ನೆಮ್ಮದಿ ತಂದಿದೆ. ನಾವು ಕೂಡ ಐದು ದಿನ ನಮ್ಮ ಮಕ್ಕಳ ಖಾಯಿಲೆಯಿಂದ ವಿಚಲಿತರಾಗಿದ್ದೇವು. ಸರ್ಕಾರ ರೋಗಿಗಳ ಮತ್ತು ವೈದ್ಯರ ನಡುವಿನ ಸಂಬಂಧಕ್ಕೆ ಮೂಗುದಾರ ಹಾಕುವ ನೆಪದಲ್ಲಿ ಅವರಿಗೆ ಭಯ ಹುಟ್ಟಿಸಲು ಮುಂದಾಗಿರುವುದು ಸರಿಯಲ್ಲ ಎಂದರು.