BREAKING NEWS(click on the news)----------
  • ಹಾಸ್ಟೆಲ್ ನಲ್ಲಿಯೇ ರಾತ್ರಿ ಕಳೆದು ರಿಯಾಲಿಟಿ ಚೆಕ್ ಮಾಡಿದ ಐಎಎಸ್ ಅಧಿಕಾರಿ ಮಣಿವಣ್ಣನ್


    Date : 2017-11-21 SHARE

    ಧಾರವಾಡ: ಹಿರಿಯ ಐಎಎಸ್ ಅಧಿಕಾರಿ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಯಾಗಿರುವ ಪಿ. ಮಣಿವಣ್ಣನ್ ಅವರು ಸೋಮವಾರ ರಾತ್ರಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಬಿಸಿಎಂ ಹಾಸ್ಟೆಲ್ ಗೆ ದಿಢೀರ್ ಭೇಟಿ ನೀಡಿ ರಾತ್ರಿ ವಾಸ್ತವ್ಯ ಮಾಡಿ ರಿಯಾಲಿಟಿ ಚೆಕ್ ಮಾಡಿದರು. ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತಂತೆ ಮಾಹಿತಿ ಪಡೆಯಲು ರಾತ್ರಿಯೇ ಹಾಸ್ಟೆಲ್ ಗೆ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳ ಗಮನ ಸೆಳೆದರು. ಬಳಿಕ ವಿದ್ಯಾರ್ಥಿಗಳಿಗೆ ನೀಡಲಾಗುವ ಊಟವನ್ನೇ ಮಾಡಿ, ವಿದ್ಯಾರ್ಥಿಗಳು ಮಲಗುವ ಜಾಗದಲ್ಲೇ ಮಲಗಿ ಅವರ ಸ್ಥಿತಿಗತಿ ಅರಿತುಕೊಂಡರು. ಮಂಗಳವಾರ ಬೆಳಿಗ್ಗೆ ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ವಾರ್ಡನ್ ಗಳ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದರು. ಆ ಬಳಿಕ ಗ್ರಾಮದಲ್ಲಿ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯಗಳ ಬಗ್ಗೆ ತಿಳಿದುಕೊಂಡರು. ನಂತರ ವಿದ್ಯಾರ್ಥಿಗಳೊಂದಿಗೆ ಅಲ್ಪೋಪಹಾರ ಸೇವಿಸಿ ಸರಳತೆ ಮೆರೆದರು. ಮಣಿವಣ್ಣನ್ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಜಿಪಂ ಸಿಇಓ ಆರ್. ಸ್ನೇಹಲ್ ಸಾಥ್ ನೀಡಿದರು.