BREAKING NEWS(click on the news)----------
  • ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಬಾಲ ವಿಜ್ಞಾನಿಗಳ ಕಲರವ


    Date : 2017-11-22 SHARE

    ಧಾರವಾಡ : ಅಲ್ಲಿ ನೂರಾರು ಬಾಲ ವಿಜ್ಞಾನಿಗಳು ಸಮಾಗಮಗೊಂಡಿದ್ದರು, ಆರೋಗ್ಯ, ಯೋಗ ಕ್ಷೇಮ, ಸಂಪನ್ಮೂಲ ನಿರ್ವಹಣೆ, ಆಹಾರ ಭದ್ರತೆ, ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ, ಸಾರಿಗೆ ಸಂಪರ್ಕ, ಡಿಜಿಟಲ್ ತಂತ್ರಜ್ಞಾನ, ಗಣಿತಶಾಸ್ತ್ರದಿಂದ ವಿನ್ಯಾಸ ಹೀಗೆ 80ಕ್ಕೂ ಹೆಚ್ಚು ವಿಜ್ಞಾನದ ವಿಭಿನ್ನ ಮಾದರಿಗಳು ಅಲ್ಲಿ ನೋಡುಗರ ಮನ ಸೆಳೆಯುವುಲ್ಲಿ ಯಶಸ್ವಿಯಾದವು, ಇಂತಹ ಒಂದು ಅದ್ಬುತ ವಿಜ್ಞಾನ ಲೋಕ ಅನವಾವರಣಗೊಂಡಿದ್ದು ಧಾರವಾಡದ ಡಯಟ್ ಆವರಣದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ. ವಿಭಿನ್ನ ಆಲೋಚನೆ, ಚಿಂತನೆಗಳಿಗೆ ಜೀವ ತುಂಬಿದ ಬಾಲ ವಿಜ್ಞಾನಗಳ ಪ್ರಯತ್ನಕ್ಕೆ ಪ್ರತಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಧಾರವಾಡ ಜಿಲ್ಲೆಯ ಐದು ತಾಲೂಕುಗಳ ವಿವಿಧ ಪ್ರೌಢ ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ವಿಚಾರ ಧಾರೆಗಳನ್ನು ಪ್ರಸ್ತುತಪಡಿಸಿದರು. ನವದೆಹಲಿಯ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್ಸಿಇಆರ್ಟಿ) ಮಾರ್ಗದರ್ಶನದಂತೆ ಜಿಲ್ಲಾ ಮಟ್ಟದಲ್ಲಿ ಪ್ರತಿ ಶಿರ್ಷಿಕೆಯಡಿ ಪ್ರಥಮ ಬಹುಮಾನ ಪಡೆದ 6 ಶಾಲೆಗಳ ವಿದ್ಯಾರ್ಥಿಗಳು ತಮ್ಮ ಮಾದರಿಗಳೊಂದಿಗೆ ನವೆಂಬರ್ 30 ರಂದು ಮೈಸೂರು ಡಯಟ್ದಲ್ಲಿ ಜರುಗುವ ರಾಜ್ಯ ಮಟ್ಟದ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವಸ್ತು ಪ್ರದರ್ಶನವನ್ನು ಧಾರವಾಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಿನ್ಸಿಪಾಲ್ ಸುಮಂಗಳಾ ಕುಚಿನಾಡ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಯಟ್ ಉಪಪ್ರಾಚಾರ್ಯ ಸಾಯಿರಾಬಾನು ಖಾನ್, ಉಪನ್ಯಾಸಕರುಗಳಾದ ಜಿ.ಎಂ. ವೃಷಭೇಂದ್ರಯ್ಯ, ಜಯಶ್ರೀ ಕಾರೇಕರ, ಅಶೋಕುಮಾರ ಸಿಂದಗಿ, ರಾಜೇಶ್ವರಿ ಕುಡಚಿ, ಡಾ.ಶೋಭಾ ನಾಯ್ಕರ, ವಿಜಯಲಕ್ಷ್ಮಿ ಹಂಚಿನಾಳ, ಎಚ್.ಪಿ. ಕಡ್ಲಿಮಟ್ಟಿ, ಪ್ರಕಾಶ ಅಂಗಡಿ, ಪ್ರಮಿಳಾ ಬೂದಿಹಾಳ, ಎಂ.ಎ. ಕುಲಕರ್ಣಿ, ನಫೀಜಾಬಾನು ದಾವಲಸಾಬನವರ, ಸಾವಿತ್ರಿ ಕೋಳಿ, ಕೆ.ಎಸ್. ಬಂಗಾರಿ, ಸಾಯಿ ವಿಜ್ಞಾನ ಪ.ಪೂ. ಕಾಲೇಜಿನ ನಿರ್ದೇಶಕ ಶಿವಶಂಕರ ರಾವ್, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಸಂಜೀವಕುಮಾರ ಭೂಶೆಟ್ಟಿ, ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಸಹ ಸಂಪಾದಕ ಗುರುಮೂರ್ತಿ ಯರಗಂಬಳಿಮಠ, ಶಿವಣ್ಣ ಯಾವಗಲ್ಲ ಉಪಸ್ಥಿತರಿದ್ದರು.