ರಾಜ್ಯಮಟ್ಟದ ಟೇಕ್ವಾಂಡೋ ಚಾಂಪಿಯನ್ಶಿಪ್ ನಲ್ಲಿ ‘ಸಮಗ್ರ ರನ್ನರ್ ಅಪ್’ಪ್ರಶಸ್ತಿ ಮುಡಿಗೇರಿಸಿಕೊಂಡ ಧಾರವಾಡದ ವಿದ್ಯಾರ್ಥಿಗಳು
Date : 2017-11-22 SHARE
ಧಾರವಾಡ : ಮಡಿಕೇರಿಯಲ್ಲ್ಲಿ ಇತ್ತೀಚೆಗೆ ನಡೆದ 35ನೇ ರಾಜ್ಯಮಟ್ಟದ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಟೇಕ್ವಾಂಡೋ ಚಾಂಪಿಯನ್ಶಿಪ್ -2017ನಲ್ಲಿ ಧಾರವಾಡ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ವಿಧ್ಯಾರ್ಥಿಗಳಾದ ಸಬ್ ಜೂನಿಯರ್ ವಿಭಾಗದಲ್ಲಿ ಭಾಗ್ಯರಾಜ ಪ್ರತಾಪುರೆ ಕಂಚಿನ ಪದಕ, ಪ್ರಸಾದ ಲಿಂಗನಗೌಡರ ಬಂಗಾರದ ಪದಕ, ಪ್ರಮೋದಗೌಡ ದ್ಯಾಪೂರ ಬಂಗಾರದ ಪದಕ, ಸಾಯಿಪ್ರಸಾದ ಪಿ.ಕೆ. ಬಂಗಾರದ ಪದಕ, ಸುಪ್ರೀತ ಥಿಟೆ ಬಂಗಾರದ ಪದಕ, ಅಮೃತಾಸಿರಿ ಪಾಟೀಲ ಕಂಚಿನ ಪದಕ, ಅದಿತಿ ಪಿ.ಕೆ. ಬಂಗಾರದ ಪದಕ, ಪೂರ್ವಿ ಹಳೆಹೊಳ್ಳಿ ಕಂಚಿನ ಪದಕ, ಸಿಂಚನಾ ಮರಿಗೌಡರ ಕಂಚಿನ ಪದಕ, ವೈದೇಹಿ ಕುಲಕರ್ಣಿ ಬೆಳ್ಳಿ ಪದಕ, ಪ್ರೇಮಾ ಕುಲಕರ್ಣಿ ಬಂಗಾರದ ಪದಕ, ಜೂನಿಯರ್ ವಿಭಾಗದಲ್ಲಿ ಸ್ಫೂರ್ತಿ ನಿಕ್ಕಂ ಬೆಳ್ಳಿ ಪದಕ, ಸಿರಿ ನಂದಿಹಳ್ಳಿ ಬೆಳ್ಳಿ ಪದಕ, ಸಹನಾ ಗೋಕಾವಿ ಬಂಗಾರದ ಪದಕ, ಮಾಣಿಕ್ಯ ಬಿಡಿಕರ ಬೆಳ್ಳಿ ಪದಕ, ಸುದೀಕ್ಷಾ ಸಿ.ಸಿ. ಬಂಗಾರದ ಪದಕ, ಸಂಜನಾ ವಿ ಬಳ್ಳಾರಿ ಬಂಗಾರದ ಪದಕ, ಗಣೇಶ ಪಿ.ಸಿ. ಬೆಳ್ಳಿ ಪದಕ, ನಿರಂಜನ ಆನಿಕಿವಿ ಬೆಳ್ಳಿ ಪದಕ, ಅರಫಾತ ಪೀರಜಾದೆ ಕಂಚಿನ ಪದಕ, ಮನೋಜಕುಮಾರ ಕಂಚಿನ ಪದಕ, ಮಹೇಶ ಅಂಗಡಿ ಕಂಚಿನ ಪದಕ, ದಿತೀಶ ಶೆಟ್ಟಿ ಬೆಳ್ಳಿ ಪದಕ, ಸಮರ್ಥ ಥಿಟೆ ಬಂಗಾರದ ಪದಕ, ಕೃಷ್ಣ ಹೊಸರೆಡ್ಡಿ ಬಂಗಾರದ ಪದಕ, ಶಿವಶಂಕರ ಪಳೋಟಿ ಬೆಳ್ಳಿ, ಯೋಗೀಶ ಹಿರೇಮಠ ಕಂಚಿನ ಪದಕ, ಸೀನಿಯರ್ ವಿಭಾಗದಲ್ಲಿ ವೈಷ್ಣವಿ ಪೂಜಾರಿ ಬಂಗಾರದ ಪದಕ, ನಿಧಿ ಸುಲಾಖೆ ಬಂಗಾರದ ಪದಕ, ಶ್ರೇಯಾ ಮರಿಗೌಡರ ಬಂಗಾರದ ಪದಕ, ಸಮರ್ಥ ಥಿಟೆ ಬಂಗಾರ ಪದಕ, ಅಕ್ಬರ ಬಂಗಾರದ ಪದಕ, ಅಜ್ಮಲ ಬಂಗಾರದ ಪದಕ ಗಳಿಸಿರುತ್ತಾರೆ. ಸಬ್ ಜೂನಿಯರ್ ವಿಭಾಗದಲ್ಲಿ 44 ಅಂಕಗಳಿಂದ 3ನೇ ಸ್ಥಾನ, ಜೂನಿಯರ್ ವಿಭಾಗದಲ್ಲಿ 60 ಅಂಕಗಳಿಂದ ಪ್ರಥಮ ಸ್ಥಾನ, ಸೀನಿಯರ್ ವಿಭಾಗದಲ್ಲಿ 42 ಅಂಕಗಳಿಂದ ಎರಡನೇ ಸ್ಥಾನ ಹಾಗೂ ಒಟ್ಟಾರೆ 146 ಅಂಕಗಳಿಂದ “ಓವರ್ಆಲ್ ರನ್ನರ್ಅಪ್ ಪ್ರಶಸ್ತಿ”ತಮ್ಮದಾಗಿಸಿಕೊಂಡಿದ್ದಾರೆ. ಇವರ ಸಾಧನೆಗೆ ಜಿಲ್ಲಾ ಟೇಕ್ವಾಂಡೋ ಸಂಸ್ಥೆ ಪದಾಧಿಕಾರಿಗಳು, ತಂಡದ ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.