BREAKING NEWS(click on the news)----------
  • ಧಾರವಾಡ ತಹಸಿಲ್ದಾರ ಕಚೇರಿಯಲ್ಲಿ ಸಿಸಿಟಿವಿಗಳ ಅಳವಡಿಕೆ


    Date : 2017-11-20 SHARE

    ಧಾರವಾಡ: ತಾಲೂಕು ಕಚೇರಿ ಆವರಣದಲ್ಲಿರುವ ತಹಶೀಲ್ದಾರ ಕಾರ್ಯಲಯ, ಸಿಬ್ಬಂದಿ, ಆಹಾರ, ಭೂಮಿ ಹಾಗೂ ಶಾಖೆಗಳು, ಅಭಿಯಂತರ ಇಲಾಖೆ, ಕೆಎಲ್‍ಆರ್ ವಿಭಾಗ, ರೆರ್ಕಾಡ್ ರೂಮ್ ಸೇರಿದಂತೆ ಒಟ್ಟು 25 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಧಾರವಾಡ ತಾಲೂಕು ಕಚೇರಿಯಲ್ಲಿ ನೂತನವಾಗಿ ಆಳವಡಿಸಲಾಗಿರುವ ಸಿಸಿಟಿವಿ ಕಾರ್ಯಾಚರಣೆಯನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೋಮ್ಮನಳ್ಳಿಯವರು ಉದ್ಘಾಟಿಸಿದರು. ಸಿಸಿಟಿವಿ ಅಳವಡಿಸಿರುವ ಮಾಡ್ರನ್ ಮಲ್ಟಿ ಟೆಕ್ ಕಂಪನಿಯು ನೂತನ ತಂತ್ರಜ್ಞಾನ ಬಳಸಿ ಜಿಡಿಎಂಸ್ ಮೊಬೈಲ್ ಆ್ಯಪ್ ಅಭಿವೃದ್ದಿ ಪಡಿಸಿದ್ದು, ಸಿಸಿಟಿವಿ ಕಾರ್ಯಚರಣೆಯನ್ನು ಮೊಬೈಲ್‍ನಿಂದಲೂ ಸಹ ವೀಕ್ಷಿಸಬಹುದು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ಧಾರವಾಡ ತಹಶೀಲದಾರ ಪ್ರಕಾಶ ಕುದರಿ, ಕಂದಾಯ ನಿರೀಕ್ಷಕ ಶ್ರೀಧರ ಉಪಸ್ಥಿತರಿದ್ದರು.