ಕೆಪಿಸಿಸಿ ಸದಸ್ಯ ದೀಪಕ ಚಿಂಚೋರೆ ನೇತೃತ್ವದಲ್ಲಿ ಮನೆ ಮನೆ ಕಾಂಗ್ರೆಸ್ ಅಭಿಯಾನ
Date : 2017-11-20 SHARE
ಧಾರವಾಡ : ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಅವರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಹತ್ತು ಹಲವು ಜನಪರ ಯೋಜನೆಗಳನ್ನು ಕೈಗೊಂಡ ಪರಿಣಾಮ ಕರ್ನಾಟಕವು ದೇಶದಲ್ಲಿಯೇ ಮಾದರಿಯಾಗುವ ಮೂಲಕ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಕೆಪಿಸಿಸಿ ಸದಸ್ಯ ದೀಪಕ ಚಿಂಚೋರೆ ಹೇಳಿದರು. ಇಲ್ಲಿಯ ವಾರ್ಡ ನಂ 19ರ ವ್ಯಾಪ್ತಿಯಲ್ಲಿರುವ ಬರುವ ಗಾಂಧಿನಗರದ ಸಾಯಿ ಬಾಬಾ ದೇವಸ್ಥಾನದ ಬೂತ್ ನಂಬರ್ 128ರಲ್ಲಿ ಸೋಮವಾರ ಬೆಳಗ್ಗೆ ಮನೆ ಮನೆ ಕಾಂಗ್ರೆಸ್ ಅಭಿಯಾನದ ನೇತೃತ್ವ ವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 165 ಭರವಸೆಗಳ ಪೈಕಿ ಈಗಾಗಲೇ 155 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ. ಹೀಗಾಗಿ ನಾಡಿನ ಜನತೆ ಮುಂಬರುವ 2018ರ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೋಮ್ಮೆ ಕಾಂಗ್ರೆಸ್ಗೆ ಆರ್ಶೀವಾದ ಮಾಡುವ ಮೂಲಕ ಕೋಮುವಾದಿ ಬಿಜೆಪಿಗೆ ತಕ್ಕ ಪಾಠ ಕಲಿಸುವ ಜೊತೆಗೆ ಸದೃಢ ಸಮೃದ್ಧ ನವ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದರು. ನಂತರ ರಾಜ್ಯ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೈಗೊಂಡ ಸಾಧನೆಗಳ ಪುಸ್ತಕಗಳನ್ನು ಮನೆ ಮನೆಗೆ ತಲುಪಿಸಲಾಯಿತು. ಈ ಮನೆ ಮನೆಗೆ ಕಾಂಗ್ರೆಸ್ ಅಭಿಯಾನದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶೈಲಜಾ ಕಾಮರಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬುರಾನ ಗವಳಿ, ಮುಖಂಡರಾದ ಇಸ್ಮಾಯಿಲ್ ತಮಟಗಾರ, ಹಜರತ್ ಅಲಿ ಗೊರವನಕೊಳ್ಳ, ಮುಖಂಡರಾದ ಗಣಪತಿ ಮುಂಜಿ, ಎಸ್.ಕೆ. ಟಿಕಾರೆ, ಪಿ.ಪಿ. ಹೊಸಕಟ್ಟಿ, ಸಿ.ಪಿ. ಹಿರೇಮಠ, ಪಿ.ವಿ. ಹೂಗಾರ, ಪಿ.ಎಚ್. ವಡ್ಡರ, ಮುತ್ತು ಕೊಟೂರ, ಪ್ರಭಾಚಂದ್ರ ಶೆಟ್ಟಿ, ಬೂತ್ ಅಧ್ಯಕ್ಷರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.