BREAKING NEWS(click on the news)----------
  • ರಾಜ್ಯಮಟ್ಟದ ಭಾವಗೀತ ಸ್ಪರ್ಧೆಯಲ್ಲಿ ನಿಖಿಲ್, ಶರ್ವಾಣಿ ಪ್ರಥಮ


    Date : 2017-11-20 SHARE

    ಚಾಮರಾಜನಗರ: ಇಲ್ಲಿಯ ರೋಟರಿ ಭವನದಲ್ಲಿ ರಂಗ ತರಂಗ ಬೆಳ್ಳಿಹಬ್ಬ ವರ್ಷಾಚರಣೆ ಪ್ರಯುಕ್ತ 19ನೇ ವರ್ಷದ ರಾಜ್ಯ ಮಟ್ಟದ ಭಾವಗೀತೆ ಸ್ಪರ್ಧೆ ನಡೆಯಿತು. ಹಿರಿಯರ ವಿಭಾಗದಲ್ಲಿ ಮೈಸೂರಿನ ಕೆ.ಸಿ. ನಿಖಿಲ್ ಪ್ರಥಮ ಸ್ಥಾನ ಪಡೆದರೆ, ಚಾಮರಾಜನಗರದ ಎಸ್. ಚರಣ್ ದ್ವಿತೀಯ, ಮೈಸೂರಿನ ತೇಜಸ್ವಿನಿ ವರ್ತಲೂರು ತೃತೀಯ ಸ್ಥಾನ ಪಡೆದರು. ಸಮಾಧಾನಕರ ಬಹುಮಾನವನ್ನು ಮೈಸೂರಿನ ಸುಷ್ಮ ಎಸ್.ಆರಾಧ್ಯ ಹಾಗೂ ಚಾಮರಾಜನಗರದ ಚಂದ್ರಶೇಖರ್ ಅವರಿಗೆ ವಿತರಿಸಲಾಯಿತು. ಅದೇ ರೀತಿ ಕಿರಿಯರ ವಿಭಾಗದಲ್ಲಿ ಪ್ರಥಮ-ಶರ್ವಾಣಿ ನಟರಾಜು ಮೈಸೂರು, ದ್ವಿತೀಯ- ಸೃಜನ್ ಭಾರದ್ವಜ್ ಚಾಮರಾಜನಗರ, ತೃತೀಯ- ನಿಶ್ಚಿತ್ ರಾಜ್, ಮೈಸೂರು ಅವರು ತಮ್ಮದಾಗಿಸಿಕೊಂಡರು. ಸಮಾಧಾನಕರ ಬಹುಮಾನವನ್ನು ಆಶ್ರಿತ್ ಕೆ.ಎಸ್, ಮೈಸೂರು ಹಾಗೂ ಸುಧನ್ವ ಎಸ್.ಭಾರದ್ವಜ್ ಚಾಮರಾಜನಗರ ಅವರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ಅವರು, ರಂಗತರಂಗ ಸಂಸ್ಥೆ 25 ವರ್ಷಗಳಿಂದ ನೂರಾರು ಸಾಹಿತಿ, ಕಲಾವಿದರಿಗೆ ಆಶ್ರಯ ನೀಡಿ ಪ್ರತಿಭಾ ವಿಕಾಸಕ್ಕೆ ಅವಕಾಶ ಕಲ್ಪಿಸಿದ ಹೆಮ್ಮೆಯ ಸಂಸ್ಥೆಯಾಗಿದೆ. ರಂಗತರಂಗ ಸಂಸ್ಥೆ ಇಲ್ಲದಿದ್ದರೆ ಜಿಲ್ಲೆ ಸಾಂಸ್ಕೃತಿಕವಾಗಿ ಬಡವಾಗುತ್ತಿತ್ತು ಎಂದರು. ಇದೇ ವೇಳೆ ಕನ್ನಡ ಬೆರಳಚ್ಚು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದ ತಾವರೆಕಟ್ಟೆಮೋಳೆ ಕೆ.ದುಂಡುಮಹದೇವಮ್ಮ ಹಾಗೂ ಕಲ್ಲಹಳ್ಳಿ ಕೆ.ಮಮತಾ ಅವರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮ ದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದೂಶೇಖರ, ಜಿಲ್ಲೆಯ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಲ್.ಸುರೇಶ್, ಸಂತೇಮರಳ್ಳಿ ಕ್ಷೇತ್ರದ ತಾ.ಪಂ ಸದಸ್ಯ ಕೆ.ರವೀಶ್, ರಂಗತರಂಗ ಅಧ್ಯಕ್ಷ ಸೋಮಶೇಖರ ಬಿಸ್ಲವಾಡಿ, ತೀರ್ಪುಗಾರರಾದ ಶಶಿಕಲಾ ಚಂದ್ರಶೇಖರ್, ಅಂಬಳೆ ಸಿದ್ದರಾಜು, ಟ್ರಸ್ಟ್‌ನ ಕಾರ್ಯದರ್ಶಿ ಕಲೆನಟರಾಜು, ನಿರ್ದೇಶಕ ಮಹಲಿಂಗ ಗಿರ್ಗಿ ಯಡಿಯೂರು ಮಹದೇವ, ಪುಷ್ಪ ಸೋಮಸುಂದರ್, ಡಿ.ಸಿ.ಸುರೇಂದ್ರ, ರಾಮಣ್ಣ, ಮಿಮಿಕ್ರಿ ಮಲ್ಲಣ್ಣ ಉಪಸ್ಥಿತರಿದ್ದರು.