ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ ಸರ್ವಧರ್ಮ ವಿಚಾರಗೋಷ್ಠಿ : ಸಂಕುಚಿತ ದೃಷ್ಠಿಕೋನ ಬಿಟ್ಟರೆ ಸಾಮರಸ್ಯ ಸಾರಲು ಸಾಧ್ಯ
Date : 2017-11-22 SHARE
ಧಾರವಾಡ : ಇಲ್ಲಿಯ ಅಂಜುಮನ್ ಇಸ್ಲಾಂ ಸಂಸ್ಥೆಯ ಆವರಣದಲ್ಲಿ ಇದ್-ಎ-ಮಿಲಾದುನ್ನಬಿ ಪ್ರಯುಕ್ತ ಸರ್ವಧರ್ಮ ವಿಚಾರಗೋಷ್ಠಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿರ್ಮಲ ನಗರದ ವಿದ್ಯಾನೀಕೆತನ ಫಾದರ್ ಪ್ರಶಾಂತ ವೆಸ್ಲೆ ಡಿಸೋಜಾ, ಅಲ್ಲಾನ ಕರುಣೆ ಮತ್ತು ದಯೆ ಎಲ್ಲ ಮಾನವ ಜನಾಂಗಕ್ಕೆ ಎಂದು ಕುರಾನನಲ್ಲಿ ಹೇಳಲಾಗಿದೆ, ನಾನು, ನನ್ನದು, ನನ್ನ ಧರ್ಮ, ಎಂಬ ಸಂಕುಚಿತ ದೃಷ್ಠಿಕೋನ ಬಿಟ್ಟು ವಿಶಾಲ ಮನೋಭಾವದಿಂದ ಮಾತ್ರ ಸಾಮರಸ್ಯ ಬೆಳೆಯಲು ಸಾಧ್ಯ, ಧರ್ಮ ಮಾರ್ಗ ತೋರಿಸಿದರೆ ಆಧ್ಯಾತ್ಮ ದೃಷ್ಠಿಕೋನ ತೋರಿಸುತ್ತದೆ, ಧರ್ಮದ ಹೆಸರಿನಲ್ಲಿ ಪೂಜೆ, ಪುನಸ್ಕಾರ ಮಹತ್ವ ನೀಡುತ್ತೇವೆ, ಆದರೆ ಮಾನವೀಯ ಮೌಲ್ಯಗಳು ಕುಸಿಯುವಂತಹ ಕೆಲಸ ಮಾಡುತ್ತೇವೆ. ಪೂಜೆಯೊಂದಿಗೆ ಮಾನವೀಯ ಮೌಲ್ಯಗಳ ಪಾಠದ ಚಿಂತನೆ ಆಗಬೇಕಾಗಿದೆ ಎಂದರು ಮನಸೂರಿನ ರೇವಣಸಿದ್ಧೇಶ್ವರ ಮಹಾಮಠದ ಶ್ರೀ ಬಸವರಾಜ ದೇವರು, ಹುಬ್ಬಳ್ಳಿಯ ಮೌಲಾನಾ ಮಹ್ಮದಲಿ ಖಾಜಿ, ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಮಾತನಾಡಿದರು. ಅಬ್ದುಲ್ ಅಜೀಜ್ ದಾಸನಕೊಪ್ಪ, ರಫಿಕ ಅಹ್ಮದ ಶಿರಹಟ್ಟಿ, ಫಾದರ್ ಎಡ್ವರ್ಡ ಫಿಲಿಪ್, ಅಸ್ತಾರ್ ಶೇಖ್, ರಫೀಖ ಬಿಸ್ತಿ, ಕೆ.ಜೆ. ಹಳಿಯಾಳ, ಹಿಲಾಲ ಗುರಾನಿ, ನಜೀರ ಹುಸೇನ ಮನಿಯಾರ, ಡಾ. ಎನ್.ಬಿ. ನಲತವಾಡ, ಇರ್ಫಾನ್ ತಾಡಪತ್ರಿ ಉಪಸ್ಥಿತರಿದ್ದರು.