BREAKING NEWS(click on the news)----------
  • ಧಾರವಾಡದ ಶ್ರೀನಿವಾಸ ಚಿತ್ರಮಂದಿರದಲ್ಲಿ ನ.24 ರಿಂದ 30 ರವರೆಗೆ ಚಲನಚಿತ್ರೋತ್ಸವ ಸಪ್ತಾಹ


    Date : 2017-11-22 SHARE

    ಧಾರವಾಡ : ರಾಜ್ಯ ಮತ್ತು ರಾಷ್ಟ ಪ್ರಶಸ್ತಿ ಪಡೆದ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಲನಚಿತ್ರಗಳಿಗೆ ಪ್ರೋತ್ಸಾಹಿಸಲು ನ.24 ರಿಂದ 30 ರವರೆಗೆ ಚಲನಚಿತ್ರೋತ್ಸವ ಸಪ್ತಾಹ ಕಾರ್ಯಕ್ರಮವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದೆ. ಧಾರವಾಡದ ಶ್ರೀನಿವಾಸ ಚಿತ್ರಮಂದಿರದಲ್ಲಿ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಚಲನಚಿತ್ರಗಳು ಉಚಿತವಾಗಿ ಪ್ರದರ್ಶನಗೊಳ್ಳಲಿವೆ. ನ.24 ರಂದು ಅಮರಾವತಿ, 25ರಂದು ಕಿರಿಕ್ ಪಾರ್ಟಿ, 26ರಂದು ರಾಮಾ ರಾಮಾ ರೇ, 27ರಂದು ಮದಿಪು-ತುಳು ಭಾಷೆ ಚಲನಚಿತ್ರ, 28ರಂದು ಯೂ-ಟರ್ನ, 29ರಂದು ಅಲ್ಲಮ ಮತ್ತು 30ರಂದು ಮಾರಿಕೊಂಡವರು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಡೊಳ್ಳಿನ ತಿಳಿಸಿದ್ದಾರೆ.