ಪ್ರವಾಸೋದ್ಯಮ ಶಿಕ್ಷಣ ಅಭಿವೃದ್ಧಿಗಾಗಿ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಇಂದಿರಾಗಾಂಧಿ ಬುಡಕಟ್ಟು ಕೇಂದ್ರಿಯ ವಿಶ್ವವಿದ್ಯಾಲಯ ಒಪ್ಪಂದ
Date : 2017-11-30 SHARE
ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯ ಅಧೀನ ಕಾಲೇಜು ಕೆಸಿಡಿಯಲ್ಲಿ ಆರಂಭಿಸಿರುವ ಪ್ರವಾಸೊದ್ಯಮ ಅಧ್ಯಯನ ವಿಭಾಗದಲ್ಲಿ ಪ್ರವಾಸೊದ್ಯಮ ಶಿಕ್ಷಣ ಉನ್ನತಿಕರಣ ಮತ್ತು ಸಂಶೋಧನೆ, ವಿಸ್ತರಣೆ ಕೈಗೊಳ್ಳಲು ಮದ್ಯಪ್ರದೇಶದ ಅಮರಕಂಟಕದಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ಕೇಂದ್ರಿಯ ವಿಶ್ವವಿದ್ಯಾಲಯದೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯವು ಇಂದು ಒಪ್ಪಂದ ಮಾಡಿಕೊಂಡು, ಎಮ್ಓಯುಗೆ ಉಭಯ ಕುಲಪತಿಗಳು ಸಹಿ ಹಾಕಿದರು. ಕರ್ನಾಟಕ ವಿಶ್ವವಿದ್ಯಾಲಯ ಸಿಂಡಿಕೆಟ ಸಭಾಂಗಣದಲ್ಲಿ ಇಂದು ಮುಂಜಾನೆ ಉಭಯ ವಿಶ್ವವಿದ್ಯಾಲಯದ ಕುಲಪತಿಗಳು ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದರು. ಕುಲಪತಿ ಪ್ರೊ. ಪ್ರಮೋದ ಭೀ. ಗಾಯಿ ಅವರು ಮಾತನಾಡಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಧ್ಯಾಪನ, ಸಂಶೋಧನೆ ಹಾಗೂ ಶೈಕ್ಷಣಿಕ ಚಟುವಟಿಕೆಗಳ ವಿಸ್ತರಣೆಗಾಗಿ ಅಂತರಾಷ್ಟ್ರೀಯ ಮಟ್ಟದ ಪೊರ್ಚಗಲ್, ಕೆಂಬ್ರಿಜ್, ಜರ್ಮನ್ ದಂತಹ ರಾಷ್ಟ್ರಗಳ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡು, ಪರಸ್ಪರ ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಅದರಂತೆ ಮದ್ಯಪ್ರದೇಶದಲ್ಲಿರುವ ರಾಷ್ಟ್ರದ ಏಕಮಾತ್ರ ಬುಡಕಟ್ಟು ವಿಶ್ವವಿದ್ಯಾಲಯವಾಗಿರುವ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದೊಂದಿಗೆ ಪ್ರವಾಸೋದ್ಯಮ ಶಿಕ್ಷಣವನ್ನು ಉನ್ನತಿಕರಿಸಲು ಮತ್ತು ನೂತನ ವಿಧಾನಗಳನ್ನು ಅಳವಡಿಸುವದಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಈ ಒಪ್ಪಂದದಲ್ಲಿ ಮುಖ್ಯವಾಗಿ ಮೂರು ಅಂಶಗಳಿದ್ದು ನಿಗದಿತ ಕಾಲಾವಧಿಗೆ ವಿದ್ಯಾರ್ಥಿಗಳ ವಿನಿಮಯ, ಅಧ್ಯಾಪಕರ ವಿನಿಮಯ ಮತ್ತು ಪಠ್ಯಕ್ರಮಗಳನ್ನು ಎರಡು ವಿಶ್ವವಿದ್ಯಾಲಯಗಳು ಪರಸ್ಪರ ವಿನಿಮಯ ಮಾಡಿಕೊಳ್ಳಲಿವೆ. ಕರ್ನಾಟಕದಲ್ಲಿರುವ ಪ್ರವಾಸಿ ತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯೋಗ ಮತ್ತು ಆರ್ಥಿಕ ಲಾಭ ಪಡೆಯಲು ವಿದ್ಯಾರ್ಥಿಗಳನ್ನು ಸಮರ್ಥಗೊಳಿಸುವುದು ಈ ಒಪ್ಪಂದದ ಆಶಯವಾಗಿದೆ ಎಂದು ಕುಲಪತಿ ಪ್ರೋ.ಗಾಯಿ ಹೇಳೀದರು. ಕುಲಪತಿ ಪ್ರೋ.ಟಿ.ವ್ಹಿ.ಕಟ್ಟಿಮನಿ ಅವರು ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಇಂದಿರಾಗಾಂಧಿ ಬುಡಕಟ್ಟು ವಿಶ್ವವಿದ್ಯಾಲಯ ಅನೇಕ ಕ್ಷೇತ್ರಗಳಲ್ಲಿ ಅಗಾಧ ಸಾಧನೆ ಮಾಡಿದೆ. ಬುಡುಕಟ್ಟು ಅಧ್ಯಯನಕ್ಕೆ ಮೀಸಲಾಗಿರುವ ಈ ವಿಶ್ವವಿದ್ಯಾಲಯ ಅರಣ್ಯ ಮಧ್ಯದಲ್ಲಿದ್ದು, ಪ್ರವಾಸೋಧ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ರೀತಿಯಲ್ಲಿ ಕ್ರಮಕೈಗೊಂಡಿದೆ. ಅದರಲ್ಲಿ ಪ್ರವಾಸೊದ್ಯಮ ಶಿಕ್ಷಣ ಸುಧಾರಣೆಯು ಮುಖ್ಯವಾಗಿದೆ. ಕರ್ನಾಟಕವು ಅನೇಕ ಐತಿಹಾಸಿಕ ಮತ್ತು ನೈಸರ್ಗಿಕವಾಗಿ ಅಸ್ತಿತ್ವದಲ್ಲಿರುವ ಪ್ರವಾಸಿ ತಾಣಗಳನ್ನು ಹೊಂದಿದೆ. ಉತ್ತರ ಕರ್ನಾಟಕದಲ್ಲಿ ಅನೇಕ ಪ್ರವಾಸಿ ಕ್ಷೇತ್ರಗಳಿದ್ದು ನಿರ್ಲಕ್ಷಕ್ಕೆ ಒಳಗಾಗಿವೆ. ಅವುಗಳ ಅಭಿವೃದ್ದಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅವುಗಳ ಮೇಲೆ ಬೆಳಕು ಚಲ್ಲಲು ಮತ್ತು ಪ್ರಚಾರ ನೀಡಲು ಈ ಒಪ್ಪಂದ ಸಹಾಯ ಮಾಡಲಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗಗಳೊಂದಿಗೂ ಸಹ ಸಂಶೋಧನೆ ಮತ್ತು ಶೈಕ್ಷಣಿಕ ವಿಸ್ತರಣೆಗಾಗಿ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವÀ ಡಾ. ಮಲ್ಲಿಕಾರ್ಜುನ ಪಾಟೀಲ, ಇಂದಿರಾಗಾಂಧಿ ಬುಡುಕಟ್ಟು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಡೋಣೂರ, ಕರ್ನಾಟಕ ಕಲಾ ಮಾಹವಿದ್ಯಾಲಯದ ಪ್ರಾಚಾರ್ಯ ಡಾ. ರಾಜೇಶ್ವರಿ ಮಹೇಶ್ವರಯ್ಯ, ಪ್ರವಾಸೋದ್ಯಮ ವಿಭಾಗದ ಸಂಯೋಜಕ ಡಾ.ಜಗದೀಶ.ಕೆ ಉಪಸ್ಥಿತರಿದ್ದರು.