BREAKING NEWS(click on the news)----------
  • ಪ್ರತಾಪ ಸಿಂಹಗೆ ರಾಣಿ ಚನ್ನಮ್ಮಳ ಚಪ್ಪಲಿಯಾಗುವ ಅರ್ಹತೆಯೂ ಇಲ್ಲ: ವಿನಯ ಕುಲಕರ್ಣಿ


    Date : 2017-11-30 SHARE

    ಧಾರವಾಡ: ಸಂಸದ ಪ್ರತಾಪ ಸಿಂಹ ಅವರು ರಾಣಿ ಚನ್ನಮ್ಮಳ ವಿರುದ್ಧ ಅವಹೇಳನಕಾರಿಯಾಗಿ ಟ್ಟೀಟ್ ಮಾಡಿದ್ದು, ಅವರಿಗೆ ರಾಣಿ ಚನ್ನಮ್ಮಳ ಚಪ್ಪಲಿಯಾಗುವ ಅರ್ಹತೆಯೂ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ ಸಿಂಹ ಅವರಿಗೆ ಚನ್ನಮ್ಮಳ ಇತಿಹಾಸ ಗೊತ್ತಿಲ್ಲ. ಈ ರೀತಿ ಅವಹೇಳನಕಾರಿಯಾಗಿ ಟ್ವೀಟ್ ಮಾಡಿರುವ ಅವರ ವಿರುದ್ಧ ನಮ್ಮ ಸಮಾಜದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಗುರುನಾಥಗೌಡ ಅವರು ನನ್ನ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ಸುದ್ದಿ ತಿಳಿದಿದೆ. ಅದನ್ನು ಪೊಲೀಸರು ತನಿಖೆ ನಡೆಸುತ್ತಾರೆ ಎಂದರು. ನಮ್ಮ ಜಿಲ್ಲೆಯಲ್ಲಿ ಸಂಸದ ಪ್ರಹ್ಲಾದ ಜೋಶಿಗಿಂತ ಮತ್ತೊಬ್ಬ ಕ್ರಿಮಿನಲ್ ಇಲ್ಲ. ಅಂಥ ಕ್ರಿಮಿನಲ್ ನಮ್ಮ ಜಿಲ್ಲೆಯಲ್ಲಿ ಯಾರೂ ಇಲ್ಲ. ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ನನ್ನ ಕೈವಾಡ ಇದೆ ಎಂದು ಜೋಶಿ ಅವರೇ ಬಿಂಬಿಸುತ್ತಿದ್ದಾರೆ. ಅವರೇ ಈ ಎಲ್ಲ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ನಾನು ಮಾತನಾಡುವುದು ಒರಟಾಗಿರಬಹುದು ಆದರೆ, ನನ್ನ ಮನಸ್ಸು ಎಂಥದ್ದು ಎಂದು ಜಿಲ್ಲೆಯ ಜನತೆಗೆ ಗೊತ್ತಿದೆ. ಜೋಶಿ ಅವರು ಮೃದುವಾಗಿ ಮಾತನಾಡಬಹುದು ಆದರೆ, ಅವರ ಮನಸ್ಸಿನಲ್ಲಿ ಎಷ್ಟು ವಿಷ ತುಂಬಿಕೊಂಡಿದೆ ಎಂಬುದೂ ಜಿಲ್ಲೆಯ ಜನತೆಗೆ ಗೊತ್ತಿದೆ. ನನ್ನ ವಿರುದ್ಧ ಕೇಳಿ ಬಂದಿರುವ ಯೋಗೀಶಗೌಡ ಹತ್ಯೆ ಆರೋಪದ ಹಿಂದೆ ಸಂಸದ ಜೋಶಿ ಇದ್ದಾರೆ. ಅವರೇ ಈ ಕೆಲಸ ಮಾಡಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಸಂದೇಶವಿಲ್ಲ ಎಂದರು. ಅವರು ಎಷ್ಟು ಬೇಕಾದಷ್ಟು ಆರೋಪ ಮಾಡಲಿ ಅದನ್ನು ತಡೆದುಕೊಳ್ಳುವ ಶಕ್ತಿ ನನ್ನಲ್ಲಿದೆ ಎಂದು ಸಚಿವರು ಹೇಳಿದರು.