ಮನಗುಂಡಿಯ ಮೃತ ಯೋಧ ಮಂಜುನಾಥ ಜಕ್ನಕಣ್ಣವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಭೇಟಿ : ಕುಟುಂಸ್ಥರಿಗೆ ಪರಿಹಾರದ ಭರವಸೆ
Date : 2017-11-30 SHARE
ಧಾರವಾಡ: ಮಹಾರಾಷ್ಟ್ರದ ಗ್ಯಾರಾಪತಿ ಪ್ರದೇಶದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ವೀರ ಮರಣ ಹೊಂದಿದ ಧಾರವಾಡ ತಾಲೂಕಿನ ಮನಗುಂಡಿಯ ಸಿ. ಆರ್.ಪಿ.ಎಫ್. ಯೋಧ ಮಂಜುನಾಥ ಜಕ್ಕಣ್ಣವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಬುಧವಾರ ಸಂಜೆ ಭೇಟಿ ನೀಡಿದ ಅವರು ಘಟನೆ ಕುರಿತು ಗ್ರಾಮಸ್ಥರು ಹಾಗೂ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ,ಮೃತ ಯೋಧನ ಎರಡು ಮಕ್ಕಳನ್ನು ಎತ್ತಿಕೊಂಡು ಸಮಾಧಾನ ಹೇಳಿದರು. ಸದಾಕಾಲವೂ ನಿಮ್ಮೊಂದಿಗೆ ನಾವಿದ್ದು ಸರ್ಕಾರದಿಂದ ಸಿಗಬೇಕಾಗಿರುವ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡುಲಾಗುವುದು ಎಂದು ಭರವಸೆ ನೀಡಲಾಗುದು ಎಂದರು. ಆತನ ಸಹೋದರ ಪುಂಡಲಿಕನಿಗೆ ಸಾಧ್ಯವಾದರೆ ಸರ್ಕಾರದಿಂದ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದರು.