BREAKING NEWS(click on the news)----------
  • ವಿಜಯ ಸಿಂಧೂರಗೆ ಜೀವಮಾನ ಸಾಧನೆಯ ಕುಂಜಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿ, ಬಿಜಯ್ ಬಿಸ್ವಾಲ್ ಗೆ ಕುಂಚಕಲಾ ರಾಷ್ಟ್ರೀಯ ಪ್ರಶಸ್ತಿ : ಯಾಮಿನಿ ಶರ್ಮಾ,ಅಮಿತ್ ಕಮ್ಮಾರಗೆ ಯುವ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿ


    Date : 2017-11-30 SHARE

    ಧಾರವಾಡ : ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಡಿ.ವ್ಹಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜಯ ಸಿಂಧೂರ ಅವರಿಗೆ ಜೀವಮಾನ ಸಾಧನೆಯ ಕುಂಜಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿ, ಬಿಜಯ್ ಬಿಸ್ವಾಲ್ ಅವರಿಗೆ ಕುಂಚಕಲಾ ರಾಷ್ಟ್ರೀಯ ಪ್ರಶಸ್ತಿ ಹಾಗೂ ಯಾಮಿನಿ ಶರ್ಮಾ ಮತ್ತು ಅಮಿತ್ ಕಮ್ಮಾರ ಅವರಿಗೆ ಯುವ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಕಲಾವಿದ ವಿಜಯ ಸಿಂಧೂರ ಏಳು ಸ್ವರಗಳ ಸಂಗೀತ ಮತ್ತು ಏಳು ಬಣ್ಣಗಳ ಚಿತ್ರಕಲೆ ಸಾಂಸ್ಕೃತಿಕ ಲೋಕದಲ್ಲಿ ಮಹತ್ವ ಪಡೆದಿರುವ ಅವಳಿಜವಳಿ ಕಲೆಗಳಾಗಿವೆ. ಸಂಗೀತ ಮತ್ತು ಚಿತ್ರಕಲೆಗೆ ಆಸಕ್ತಿ ಮತ್ತು ಆತ್ಮವಿಶ್ವಾಸ ಮುಖ್ಯ. ಸಮಯಕ್ಕೆ ಬೆಲೆ ನೀಡಿ ಸಂಯಮದಿಂದ ಮನಸ್ಸಿನ ಕಲ್ಪನೆಗಳಿಗೆ ಚಿತ್ರದಲ್ಲಿ ಜೀವತುಂಬುವ ಸಮರ್ಪಣಾ ಮನೋಭಾವದಿಂದ ನಿರಂತರ ಪ್ರಯತ್ನ ಮಾಡಿದಾಗ ಮಾತ್ರ ಯಶಸ್ವಿ ಚಿತ್ರಕಲಾಕಾರರಾಗಿ ಬೆಳೆಯಲು ಸಾಧ್ಯ ಎಂದರು.‌ ಅರಿವೇ ಗುರು ಎಂಬುದು ಮಹಾ ವಿದ್ಯೆ. ಅದನ್ನು ಯಾವ ಗುರುವಿನಿಂದಲೂ ಕಲಿಸಲು ಸಾಧ್ಯವಿಲ್ಲ. ಆದರೆ ಸ್ವತಃ ಪ್ರಯತ್ನಪಟ್ಟು ಅನುಭವ ಪಡೆಯುವುದರ ಮೂಲಕ ಅರಿವೇ ಗುರು ಎಂಬುದನ್ನು ಮನದಟ್ಟುಮಾಡಿಕೊಳ್ಳಬೇಕು. ದೇವರು ಕೇವಲ ಮನುಷ್ಯರಿಗೆ ಮಾತ್ರ ಬುದ್ಧಿಶಕ್ತಿ ನೀಡಿದ್ದು ಅದನ್ನು ಉಪಯೋಗಿಸಿಕೊಂಡು ಸಾಧನೆ ಮಾಡುವುದರ ಜೊತೆಗೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ ಎಂದರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲಲಿತ ಕಲಾ ಅಕಾಡಮಿ ಅಧ್ಯಕ್ಷರಾದ ಪ್ರೊ. ಎಂ.ಜಿ.ಕಮಲಾಕ್ಷಿ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಪ್ರಬಾರಿ ಕುಲಪತಿ ಡಾ. ಸಿ.ಎಸ್.ಪಾಟೀಲ, ಟ್ರಸ್ಟ್ ಕಾರ್ಯಾಧ್ಯಕ್ಷ ಚಂದ್ರಕಾಂತ ಬೆಲ್ಲದ, ಸುರೇಶ ಹಾಲಬಾವಿ, ಬಿ.ಮಾರುತಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೇರಿದಂತೆ ಇತರರು ಇದ್ದರು.