BREAKING NEWS(click on the news)----------
  • ಜಿಲ್ಲೆಯಲ್ಲಿ ಇಳಿಮುಖವಾದ ಎಚ್.ಐ.ವಿ. ಬಾಧಿತರ ಸಂಖ್ಯೆ : ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಜನ ಜಾಗೃತಿ ಜಾಥಾ


    Date : 2017-12-01 SHARE

    ಧಾರವಾಡ : ಜಿಲ್ಲೆಯಲ್ಲಿ ಎಚ್.ಐ.ವಿ ಸೊಂಕಿತರ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತಿರುವುದು ಸಮಾಧಾನಕರ ಸಂಗತಿಯಾಗಿದೆ. ಪ್ರಸಕ್ತ ಸಾಲಿನ ಅಕ್ಟೋಬರ್ ಅಂತ್ಯದವರೆಗೆ ಲೈಂಗಿಕ ಚಿಕಿತ್ಸಾ ಕೆಂದ್ರಗಳಲ್ಲಿ 3210 ಜನರು ಲೈಂಗಿಕ ಸಂಪರ್ಕ ಸೋಂಕುಗಳ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಐದು ನ್ಯಾಕೋ ಆದಾರಿತ ಹಾಗೂ ಆರು ಖಾಸಗಿ ರಕ್ತ ನಿಧಿ ಕೆಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ 33060 ಜನರ ರಕ್ತ ಪರೀಕ್ಷಿಸಿದ್ದು ಅದರಲ್ಲಿ 369 ಎಚ್.ಐವಿ. ಭಾದಿತರನ್ನು ಗುರುತಿಸಲಾಗಿದ್ದರೆ, 26670 ಗರ್ಭಿಣಿ ಸ್ತ್ರೀಯರ ಪೈಕಿ ಕೇವಲ 17 ಗರ್ಭೀಣಿಯಲ್ಲಿ ಪತ್ತೆಯಾಗಿದೆ. ಧಾರವಾಡ ಏ.ಆರ್.ಟಿ ಚಿಕಿತ್ಸಾ ಕೆಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಎಡ್ಸ್ ನಿಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ನೂರಾರು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶುಕ್ರವಾರ ಬೆಳಗ್ಗೆ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ಜನ ಜಾಗೃತಿ ಜಾಥಾಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಮಚಂದ್ರ ಹುದ್ದಾರ ಅವರು ಚಾಲನೆ ನೀಡಿದರು. ಈ ಜಾಥಾದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ, ಸೇರಿದಂತೆ ನಗರದ ವಿವಿಧ ಶಾಲಾ, ಕಾಲೇಜುಗಳ ನೂರಾರು ವಿದ್ಯಾರ್ಥಿಗಳು, ಪಾಲ್ಗೊಂಡಿದ್ದರು.