BREAKING NEWS(click on the news)----------
  • ಧಾರವಾಡ - ಬೆಂಗಳೂರು ಎಸಿ ಸ್ಲೀಪರ್ ಬಸ್ ಸೇವೆಗೆ ಸಚಿವ ವಿನಯ ಕುಲಕರ್ಣಿ ಚಾಲನೆ


    Date : 2017-11-30 SHARE

    ಧಾರವಾಡ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೂತನವಾಗಿ ಆರಂಭಿಸಿರುವ ಧಾರವಾಡ-ಹುಬ್ಬಳ್ಳಿ-ಬೆಂಗಳೂರು ಹವಾನಿಯಂತ್ರಿತ ಸ್ಲೀಪರ್ ಬಸ್ ಸೇವೆಗೆ ಗಣಿ,ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿ ಗುರುವಾರ ಬೆಳಗ್ಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಈ ಬಸ್ಸು ಪ್ರತಿ ರಾತ್ರಿ ೯ ಗಂಟೆಗೆ ಧಾರವಾಡದಿಂದ ಹೊರಟು ಬೆಳಿಗ್ಗೆ ೬ ಗಂಟೆಗೆ ಬೆಂಗಳೂರು ತಲುಪಲಿದೆ. ಪ್ರತಿ ರಾತ್ರಿ ೧೦ ಗಂಟೆಗೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ೭ ಗಂಟೆಗೆ ಧಾರವಾಡ ತಲುಪಲಿದೆ. ವಾಕರಸಾಸಂ ಅಧ್ಯಕ್ಷ ಸದಾನಂದ ಡಂಗನವರ್, ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಚನ್ನಪ್ಪಗೌಡ್ರ ಮತ್ತಿತರರು ಇದ್ದರು