ಧಾರವಾಡ ಆಕಾಶವಾಣಿ ಕೇಂದ್ರಕ್ಕೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ನಾಟಕ, ರೂಪಕ, ಬಾನುಲಿ ಸರಣಿ ಹಾಗೂ ಜಿಂಗಲ್ ವಿಭಾಗಗಳಲ್ಲಿ ಐದು ಪ್ರಶಸ್ತಿ
Date : 2017-12-01 SHARE
ಧಾರವಾಡ : ಇಲ್ಲಿಯ ಆಕಾಶವಾಣಿ ಕೇಂದ್ರಕ್ಕೆ 2017ರ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ನಾಟಕ, ರೂಪಕ, ಬಾನುಲಿ ಸರಣಿ ಹಾಗೂ ಜಿಂಗಲ್ ವಿಭಾಗಗಳಲ್ಲಿ ಐದು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಗುರುವಾರ ಬಾನುಲಿಯ ಬಹುಮಾನ ಪಡೆದ ವಿಜೇತರಿಗೆ ಸಂತೋಷಕೂಟ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಧಾರವಾಡ ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಆಕಾಶವಾಣಿಯ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಸತೀಶ ಪರ್ವತಿಕರ, ಎಸ್. ಎನ್. ಸನೀಲ್ಕುಮಾರ್(ಇ) , ಪ್ರಶಸ್ತಿ ವಿಜೇತರಾದ ಅನಿಲ ದೇಸಾಯಿ, ಮಾಯಾರಾಮನ್, ಶ್ರೀಮತಿ ಸುರೇಖಾ ಸುರೇಶ, ದಿವಾಕರ ಹೆಗಡೆ, ಅನುಷ್ಕಾ ಕುಡತರ್ಕರ್, ಮಂಜುಳಾ ಪುರಾಣಿಕ, ಡಾ. ಬಸು ಬೇವಿನಗಿಡದ ಉಪಸ್ಥಿತರಿದ್ದರು.