ಶಾಲಾ ಮಕ್ಕಳಿಂದ ಜಾನಪದ ಕಲೆಗಳ ಅನಾವರಣ ಕೋಲಾಟಕ್ಕೆ ಮನಸೋತ ಪ್ರೇಕ್ಷಕರು
Date : 2017-12-01 SHARE
ಧಾರವಾಡ : ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಮತ್ತು ಜಾನಪದ ಸಂಶೋದನ ಕೇಂದ್ರ ಹಮ್ಮಿಕೊಂಡ ಜಾನಪದ ಸಂಭ್ರಮ-2017 ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವಿವಿಧ ಜಾನಪದ ಕಲೆಗಳು ಅನಾವರಣಗೊಂಡವು. ಗೊಂಬೆಯಾಟ, ಜಾನಪದ ನೃತ್ಯ, ಲಾವಣಿ ಕೋಲಾಟ, ಕಿರುನಾಟಕ, ಬಿಸೋ, ಕುಟ್ಟುವ ಪದಗಳು ಸೇರಿದಂತೆ ಅನೇಕ ಕಲೆಗಳಿಗೆ ನೆರೆದಿದ್ದ ನೂರಾರು ಪ್ರೇಕ್ಷಕರು ಮನಸೋತರು. ಇದೇ ವೇಳೆ ಮುಖ್ಯೋಪಾಧ್ಯೆ ಪ್ರಭಾವತಿ ನಿಂಬನಗೌಡರ, ಶ್ರೀಮತಿ ಮಾಳಿಗೇರ, ಸಿದ್ದು ಬಿರಾದಾರ ಬೆಬ್ಬಲಗೇರಿ, ಪ್ರಕಾಶ ಕಾಂಬಳೆ, ಸಿ.ಎಚ್.ಬಡೆಖಾನನವರ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಂಗ ಕರ್ಮಿ ಜಗುಚಂದ್ರ ಕೂಡಲ , ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ, ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಬಸವಲಿಂಗಯ್ಯ ಹಿರೇಮಠ, ವಿಶ್ವೇಶ್ವರಿ ಹಿರೇಮಠ , ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.