ನವಲಗುಂದ ವಿಧಾನ ಸಭಾ ಕ್ಷೇತ್ರದ ವಿವಿಧ ರಸ್ತೆ ಕಾಮಗಾರಿಗೆ 20 ಕೋಟಿ ಅನುದಾನ : ಶಾಸಕ ಎನ್.ಹೆಚ್. ಕೋನರಡ್ಡಿ
Date : 2017-10-08 SHARE
ಹುಬ್ಬಳ್ಳಿ : ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕಿನ ವಿವಿಧ ರಸ್ತೆ ಕಾಮಗಾರಿಗೆ ಸಿಆರ್‍ಎಫ್ ಅನುದಾನದಲ್ಲಿ 20 ಕೋಟಿ ಮಂಜೂರಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಹುಬ್ಬಳ್ಳಿ-ನವಲಗುಂದ ರಸ್ತೆ ಕ್ರಾಸ್‍ನಿಂದ ಕುಸುಗಲ್-ಬ್ಯಾಹಟ್ಟಿ ರಸ್ತೆಯ ಕುಸುಗಲ್ ಗ್ರಾಮ ಪರಿಮಿತಿಯಲ್ಲಿ ದ್ವಿಪಥ ರಸ್ತೆ ನಿರ್ಮಾಣ ಮಾಡಲು 5 ಕೋಟಿ ಹಾಗೂ ಹುಬ್ಬಳ್ಳಿ ತಾಲೂಕಿನ ಸುಳ್ಳದಿಂದ ಹುಬ್ಬಳ್ಳಿ ಕೇಶ್ವಾಪೂರ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದಕ್ಕೆ 7 ಕೋಟಿ, ಹುಬ್ಬಳ್ಳಿ ಸುಳ್ಳ ರಸ್ತೆಯಿಂದ ಕುಸುಗಲ್ ರಸ್ತೆ ನಿರ್ಮಿಸಲು 3 ಕೋಟಿ ಹಾಗೂ ನವಲಗುಂದ ತಾಲೂಕಿನ ಅಂಬಿಗೇರಿ ಕ್ರಾಸ್‍ದಿಂದ ಅಣ್ಣಿಗೇರಿ ನಗರದಲ್ಲಿರುವ ನವಲಗುಂದ ರಸ್ತೆಯ ರೇಲ್ವೆ ಗೇಟ್‍ವರೆಗೆ ದ್ವಿಪಥ ರಸ್ತೆ ನಿರ್ಮಿಸಲು 5 ಕೋಟಿ ಹಂಚಿಕೆಯಾಗಿದೆ ಎಂದು ವಿವರಿಸಿದ್ದಾರೆ. ಈ ಎಲ್ಲ ರಸ್ತೆ ಕಾಮಗಾರಿಗಳಿಗೆ ಕಳೆದ ಹಲವು ವರ್ಷಗಳಿಂದ ಗ್ರಾಮಸ್ಥರ ಬೇಡಿಕೆಯಿದ್ದು, ಅವರ ಮನವಿಗೆ ಸ್ಪಂದಿಸಿ, ಯೋಜನೆಗಳಿಗೆ ಆದ್ಯತೆ ಮೇಲೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಅವುಗಳಿU ಸಿಆರ್‍ಎಫ್ ಯೋಜನೆಯಲ್ಲಿ ಅನುಮೋದನೆ ದೊರೆತಿರುವುದರಿಂದ ದೀಪಾವಳಿ ಹಬ್ಬದ ಒಳಗಾಗಿ ಭೂಮಿ ಪೂಜೆ ನೆರವೇರಿಸಿ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ತಿಳಿಸಿದ್ದಾರೆ.