BREAKING NEWS(click on the news)----------
  • ಅಂತರ್ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ : ಎಫ್‍ಪಿಎಐ ವತಿಯಿಂದ ಸಹಿ ಸಂಗ್ರಹ ಅಭೀಯಾನ


    Date : 2017-10-12 SHARE

    ಧಾರವಾಡ : ಜಗತ್ತಿನಲ್ಲಿ 10 ರಿಂದ 19ನೇ ವಯಸ್ಸಿನವರಿಗೆ 600 ಮಿಲಿಯನ್ ಹೆಣ್ಣು ಮಕ್ಕಳಿದ್ದು, ಪ್ರತಿಯೊಬ್ಬರು ತಮ್ಮನ್ನು ತಾವು ರಕ್ಷಿಸಿಕೋಳ್ಳುವ ಸಾಮಥ್ರ್ಯವನ್ನು ಹೊಂದುವಂತಾಗಬೇಕು, ಆಗ ಅತ್ಯಾಚಾರದಂತಹ ಕುಕೃತ್ಯವನ್ನು ನಿಯಂತ್ರಿಸಬಹುದು ಎಂದು ಮಾಜಿ ಶಾಸಕಿ ಸೀಮಾ ಮಸೂತಿ ಹೇಳಿದರು. ಅವರು ಅಕ್ಟೋಬರ 11 ರಂದು ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಹಾಗೂ ಸೃಷ್ಠಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಇಂದು ಅನೇಕ ಹೆಣ್ಣು ಮಕ್ಕಳು ಲಿಂಗ ಅಸಮಾನತೆ, ಹಿಂಸೆ, ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ, ಅಲ್ಲದೇ ಶೇ. 90% ರಷ್ಷು ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪ್ರತಿ 10 ನಿಮಿಷಕ್ಕೆ ಒಬ್ಬರಂತೆ ದೌರ್ಜನ್ಯದಿಂದ ಸಾವನ್ನಪ್ಪುತ್ತಿದ್ದಾರೆ. ಸಮುದಾಯದಲ್ಲಿ ತಿಳುವಳಿಕೆ ಮೂಡಿಸುವದರೊಂದಿಗೆ ಹೆಣ್ಣು ಮಕ್ಕಳ ರಕ್ಷಣೆಗಾಗಿ ಇರುವ ಹಲವಾರು ಯೋಜನೆಗಳಾದ ಭಾಗ್ಯ ಲಕ್ಷೀ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ, ಸುಕನ್ಯ ಸಮೃದ್ದಿ ಹೀಗೆ ಹತ್ತು ಹಲವು ಯೋಜನೆಗಳನ್ನು ಸಮರ್ಪಕವಾಗಿ ಉಪಯೋಗಿಸಿಕೋಳ್ಳುವ ಮೂಲಕ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು. ಖ್ಯಾತ ನ್ಯಾಯವಾದಿಗಳಾದ ಪ್ರಫುಲಾ ನಾಯ್ಕ ಮಾತನಾಡಿ, ಬದುಕುವ ಹಕ್ಕು ಎಲ್ಲರಿಗೂ ಇದೆ, ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ನು ಮಕ್ಕಳು ಮೇಲೆ ದೈಹಿಕ, ಮಾನಸಿಕ, ಲೈಂಗಿಕ ದೌರ್ಜನ್ಯಗಳು ಹೀಗೆ ಅನೇಕ ರೀತಿಯ ಶೋಷಣೆಗೆ ಒಳಗಾಗುತ್ತಾಳೆ. ಅವುಗಳನ್ನು ಎದುರಿಸಲು ಶಿಕ್ಷಣ, ಆರ್ಥಿಕವಾಗಿ ಸಬಲಿಕರಣ ಹೊಂದುವದು ಮತ್ತು ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳನ್ನು ಅರಿತು ಧೈರ್ಯದಿಂದ ಅನ್ಯಾಯದ ವಿರುದ್ದ ಹೊರಾಡುವದು ಅತೀಅವಶ್ಯಕ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೃಷ್ಠಿ ಕಾಲೇಜ ಪ್ರಾಂಶುಪಾಲರಾದ ರವಿ ಕ್ಯಾಮ್ಮಣ್ಣನವರ ಭಾರತೀಯ ಸಂಸ್ಕತಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನ ನೀಡಲಾಗಿದೆ ಅಂತಹ ಹೆಣ್ಣು ಮಕ್ಕಳು ಎಲ್ಲ ರಂಗಗಳಲ್ಲಿ ಸಮಾನವಾದ ಅವಕಾಶಗಳನ್ನು ಪಡೆಯುವಂತಾಗಬೇಕು, ಈ ರೀತಿಯ ಕಾರ್ಯಕ್ರಮಗಳು ಸಮಾಜದ ಸ್ವಾಥ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ, ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು. ಎಫ್.ಪಿ.ಎ.ಐ ನ ಕಾರ್ಯಕ್ರಮದ ಅಧಿಕಾರಿಗಳಾದ ಎನ್.ಎಫ್. ಮಡಿವಾಳರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ, ಪ್ರತಿಜ್ಞೆ ವಿಧಿ ಬೋದಿಸಲಾಯಿತು. ಈ ಕಾರ್ಯಕ್ರಮದಲ್ಲಿ 250 ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಎಫ್.ಪಿ.ಎ.ಐ ವೆಂಕಟೇಶ ಪಾಟೀಲ ಹಾಗೂ ಸೃಷ್ಠಿ ಪದವಿಪೂರ್ವ ಮಹಾವಿದ್ಯಾಲಯದ ಸಿಬ್ಬಂದಿ ಭಾಗವಹಿಸಿದ್ದರು. ಸುಹಾನಿ ಹಾಡಕರ್ ಪ್ರಾರ್ಥಿಸಿದರು, ನೀಲಮ್ಮ ಸಾಲಿ ಸ್ವಾಗತಿಸಿದರು ಎನ್,ಎಫ್, ಮಡಿವಾಳರ ವಂದಿಸಿದರು ಸುಮನ್ ಹೆಬ್ಳಿಕರ ನಿರೂಪಿಸಿದರು.