BREAKING NEWS(click on the news)----------
  • ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಕಾರಿಡಾರ್ ಆರಂಭಿಸಲು ಎಫ್‍ಕೆಸಿಸಿಐ ಹಿರಿಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಒತ್ತಾಯ


    Date : 2017-10-12 SHARE

    ಧಾರವಾಡ : ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ನಿರೀಕ್ಷಿತ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಂಭೀರ ಚಿಂತನೆಗಳು ನಡೆಸಬೇಕು ಎಂದು ಕರ್ನಾಟಕ ರಾಜ್ಯ ವಾಣಿಜ್ಯೋದ್ಯಮ ಹಾಗೂ ಕೈಗಾರಿಕೆ ಸಂಸ್ಥೆ (ಎಫ್‍ಕೆಸಿಸಿಐ) ಹಿರಿಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಹೇಳಿದರು. ಅವರು ಧಾರವಾಡದ ಮಧುರಾ ಪ್ಯಾಲೇಸ್‍ನಲ್ಲಿ ಧಾರವಾಡ ಜಿಲ್ಲಾ ವಾಣಿಜ್ಯೋದ್ಯಮ ಹಾಗೂ ಕೈಗಾರಿಕೆ ಸಂಸ್ಥೆ ಹಾಗೂ ಎಫ್‍ಕೆಸಿಸಿ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹುಬ್ಭಳ್ಳಿ ಧಾರವಾಡ ಮಧ್ಯ ನಡೆಯುತ್ತಿರುವ ರಸ್ತೆ ಅಭಿವೃದಿಯನ್ನು ತೀವ್ರ ಗತಿಯಲ್ಲಿ ಪೂರ್ಣಗೊಳಿಸುವುದು. ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಮೂಲ ಸೌಕರ್ಯ ಕೊರತೆ ನಿವಾರಿಸುವುದು. ಹಾಗೂ ಉತ್ತರ ಕರ್ನಾಟಕದ ಉದ್ಯಮಿಗಳಿಗಾಗಿ ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ಕೈಗಾರಿಕಾ ಪಾರ್ಕ ಸ್ಥಾಪಿಸುವುದು ಮತ್ತು ಹುಬ್ಭಳ್ಳಿ ಧಾರವಾಡದ ಸಿಡಿಪಿ ಅನುಮೋದನೆಗೆ ಒತ್ತಾಯಿಸಿದರು. ಸಭೆಯಲ್ಲಿ ಮೈಸೂರಿನ ಉದ್ಯಮಿ ರಾಮಣ್ಣವರ, ಮಂಡ್ಯ ಉದ್ಯಮಿ ಅರ್ಜುನ ಪಟೇಲ್, ಬೆಂಗಳೂರಿನ ಉದ್ಯಮಿ ರಾಜ್ ಪುರೋಹಿತ, ಧಾರವಾಡ ಜಿಲ್ಲಾ ವಾಣಿಜ್ಯೋದ್ಯಮ ಹಾಗೂ ಕೈಗಾರಿಕೆ ಸಂಸ್ಥೆ ಉಪಾಧ್ಯಕ್ಷ ಸಂತೋಷ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾಗನಗೌಡ ಪಾಟೀಲ ನೀರಲಗಿ, ನಿರ್ದೇಶಕರಾದ ವೆಂಕಟೇಶ, ಶಂಕರ ಪಾಟೀಲ, ಗೌತಮ ಟಿಕಾರೆ, ಸಿದ್ದು ಪಾಟೀಲ, ಡಾ. ಸುರೇಖಾ ಹಂಚಿನಾಳ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.