ಬಿಜೆಪಿಯಿಂದ ಸಂಸ್ಕ್ರತಿ ಕಲಿಯುವ ಅಗತ್ಯವಿಲ್ಲ: ದೀಪಕ ಚಿಂಚೋರೆ
Date : 2017-10-14 SHARE
ಮೋದಿ ಅವಹೇಳನ ವಿಡಿಯೋ ವೈರಲ್ ತೋರಿಸ್ತಿರಿ. ನಮ್ಮ ನಾಯಕ ರಾಹುಲ್ ಗಾಂಧಿ ಬಗ್ಗೆ ಕೇವಲವಾಗಿ ಮಾತನಾಡಿದಾಗ ನಿವೇಕೆ ಸುಮ್ಮನಿದ್ದರೀರಿ. ನಾವು ನಮ್ಮ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಮನೆ ಮನೆಗೆ ತಲುಪಿಸುತ್ತಿದ್ದೆವೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಬಿಜೆಪಿಯಿಂದ ಸಂಸ್ಕ್ರತಿ ಕಲಿಯುವ ಅಗತ್ಯವಿಲ್ಲ ಬಿಜೆಪಿಯವರು ಸಂಸ್ಕೃತಿ ಕಲಿಯಬೇಕಿದೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ಸರಕಾರ ರಾಜ್ಯದ ರೈತರ ೮ ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಅದಕ್ಕೆ ಸಚ್ಚಾ ಸರಕಾರ ಎಂದಿದ್ದೇವೆ ಎಂದರು. ನಮ್ಮ ನಾಯಕ ರಾಹುಲ್ ಗಾಂಧೀ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಬಿಜೆಪಿ ಮುಖಂಡರು ಮೊದಲು ಅವರು ಕ್ಷಮೆ ಕೇಳಲಿ. ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಯಾರು ಎನೂ ಕೇಳುವುದಿಲ್ಲ. ಅವರು ಸುಪ್ರೀಂಕೋರ್ಟ ನ್ಯಾಯಾಧೀಶರೇ, ಜನ ಕೂಗಿದರೆ ನಾವೇನು ಮಾಡಬೇಕು. ಅದೇ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹೇಳಿದರೂ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳು ಮುಗಿಬಿಳುತ್ತವೆ. ಇದು ಎಂತಹ ಸಂಸ್ಕೃತಿ, ಸಭ್ಯತೆ ಎಂದು ಪ್ರಶ್ನಿಸಿದ ಅವರು ಮೋದಿ ಅವಹೇಳನ ವಿಡಿಯೋ ವೈರಲ್ ತೋರಿಸ್ತಿರಿ. ನಮ್ಮ ನಾಯಕ ರಾಹುಲ್ ಗಾಂಧಿ ಬಗ್ಗೆ ಕೇವಲವಾಗಿ ಮಾತನಾಡಿದಾಗ ನಿವೇಕೆ ಸುಮ್ಮನಿದ್ದರೀರಿ. ನಾವು ನಮ್ಮ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಮನೆ ಮನೆಗೆ ತಲುಪಿಸುತ್ತಿದ್ದೆವೆ ಎಂದರು.