BREAKING NEWS(click on the news)----------
  • ಆತ್ಯಹತ್ಮೆ ಮಾಡಿಕೊಂಡ ರೈತ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಣೆ : ಶಾಸಕ ಎನ್.ಹೆಚ್. ಕೋನರಡ್ಡಿ


    Date : 2017-10-17 SHARE

    ನವಲಗುಂದ : ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬರುವ ವಿವಿಧ ಮಳೆ ಹಾನಿ ಪ್ರದೇಶಕ್ಕೆ ಸೋಮವಾರವೂ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ಭಾಗಶಃ ಕುಸಿದಿರುವ 25 ಮನೆಗಳನ್ನು ಪರಿಶೀಲನೆ ನಡೆಸಿದರು. ಆನಂತರ ತಲೆ ಮೊರಬ ಗ್ರಾಮದ ರಸ್ತೆ ವೀಕ್ಷಣೆ ಮಾಡಿದರು. ಬಳಿಕ ಮೊರಬ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ಪೊಲೀಸ್ ಠಾಣೆ, ಬಸ್ ನಿಲ್ದಾಣ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀರು ನುಗ್ಗಿ ಹಾನಿಯಾಗಿರುವುದನ್ನು ವೀಕ್ಷಿಸಿದರು. ಬಳಿಕ ಗುಮ್ಮಗೋಳ ಗ್ರಾಮದ ರಸ್ತೆ ಹಾನಿ, ಮನೆ ಕುಸಿತ ಪರಿಶೀಲಿಸಿದರು. ಆನಂತರ ಗುಮ್ಮಗೋಳ ಗ್ರಾಮದಲ್ಲಿ ಇತ್ತೀಚೆಗೆ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ರೈತ ನಾಗಪ್ಪ ಹನುಮಪ್ಪಾ ಜಾವೂರ ಅವರ ಪತ್ನಿಗೆ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಯಿತು. ನಂತರ ಜಾವೂರ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಶಿವಾನಂದ ಭೀಮಪ್ಪ ನಾಯ್ಕರ ಅವರ ಪತ್ನಿಗೆ 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಲಾಯಿತು. ಬಳಿಕ ಹೆಬ್ಬಾಳ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ಮಹಿಳೆ ಮಂಜವ್ವ ಕೋ. ರುದ್ರಪ್ಪ ಬನಹಟ್ಟಿ ಉರ್ಫ ಮಾದರ ಅವರ ಪತಿಗೆ 4 ಲಕ್ಷ ರೂ. ಪರಿಹಾರದ ಚೆಕ್ ವಿತರಣೆಯನ್ನು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ವಿತರಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ನವೀನ ಹುಲ್ಲೂರ, ತಾಪಂ ಇಒ ಜಿ.ಡಿ. ಜೋಶಿ, ಜೆಡಿಎಸ್ ಮುಖಂಡರಾದ ಕೃಷ್ಣ ಪಾಟೀಲ, ದೇವರಡ್ಡಿ ತಿರ್ಲಾಪುರ, ಬಸಪ್ಪ ಅಣ್ಣಿಗೇರಿ, ಮಲ್ಲಿಕಾರ್ಜುನ ಕಾಲವಾಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.