ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ನಮನ * ನೂರಾರು ಯುವಕರಿಂದ ಗೌರವ ವಂದನೆ * ಮುಂದುವರೆದ ಮನೆ ಮನೆಗೆ ಕಾಂಗ್ರೆಸ್
Date : 2017-11-03 SHARE
ಧಾರವಾಡ : ರಾಜ್ಯದ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಅವರ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬಡವರ, ಶೋಷಿತರ ಹಾಗೂ ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕಾಗಿ ಹತ್ತು ಹಲವು ವಿಭಿನ್ನ ಯೋಜನೆಗಳನ್ನು ಜಾರಿಗೊಳಿಸಿದೆ. ಹೀಗಾಗಿ ಬಡವರ ಸಬಲೀಕರಣಕ್ಕಾಗಿ ಕಾಂಗ್ರೆಸ್ಗೆ ಮತ್ತೋಮ್ಮೆ ಜನತೆ ಆರ್ಶೀವದಿಸುವ ಮೂಲಕ ಬೆಂಬಲಿಸಬೇಕು ಎಂದು ಕೆಪಿಸಿಸಿ ಸದಸ್ಯ ದೀಪಕ ಚಿಂಚೋರೆ ಅವರು ಮನವಿ ಮಾಡಿದರು. ಅವರು ವಾರ್ಡ ನಂ 1ರ ಬೂತ್ 57ರ ಕೆಲಗೇರಿಯ ಆಂಜನೇಯ ನಗರದ ಕನ್ನಡ ಶಾಲೆ ಬಳಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ನಮನ ಕಾರ್ಯಕ್ರಮ ಹಾಗೂ ಮನೆ ಮನೆಗೆ ಕಾಂಗ್ರೆಸ್ ನೇತೃತ್ವ ವಹಿಸಿ ಮಾತನಾಡಿದರು. ರಾಜ್ಯದ ಸಮಗ್ರ ಅಭಿವೃದ್ಧಿ ಮಾದರಿಯಲ್ಲೇ ಧಾರವಾಡ ಪಶ್ಚಿಮ ವಿಧಾನ ಸಭಾ ಮತಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೈಯಲು ಜನತೆ ಮುಂಬರುವ 2018ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ಕೈ ಜೋಡಿಸಬೇಕು. ಆ ಮೂಲಕ ಬಿಜೆಪಿ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಪಣತೊಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಇಸ್ಮಾಯಿಲ್ ತಮಟಗಾರ, ಸ್ವಾತಿ ಮಳಗಿ, ರಾಬರ್ಟ್ ದದ್ದಾಪುರಿ, ಯುವ ಮುಖಂಡ ಶಂಕರ ಮುಗಳಿ, ಬ್ಲಾಕ್ ಅಧ್ಯಕ್ಷ ಬುರಾನ್ ಗವಳಿ ಸೇರಿದಂತೆ ಕೆಲಗೇರಿ, ಆಂಜನೇಯ ಹಾಗು ಶಿವಶಕ್ತಿ ನಗರದ ಹಿರಿಯರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.