ವಾಲ್ಮೀಕಿ ಸಮುದಾಯದಿಂದ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿಗೆ ಸನ್ಮಾನ
Date : 2017-11-03 SHARE
ನವಲಗುಂದ : ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ನವಲಗುಂದ ನಗರದ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಾಸಕ ಎನ್.ಹೆಚ್. ಕೋನರಡ್ಡಿ ಅವರು 3 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದಕ್ಕೆ ವಾಲ್ಮೀಕಿ ಸಮುದಾಯದಿಂದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು, ಈ ಹಿಂದೆ ವಾಲ್ಮೀಕಿ ಭವನಕ್ಕೆ 1 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಸಮಾಜ ಬಾಂಧವರ ಕೋರಿಕೆ ಮೇರೆಗೆ ಅತ್ಯಾಧುನಿಕ ಶೈಲಿಯ ಭವನ ನಿರ್ಮಾಣ ಮಾಡುವ ಉದ್ದೇಶದಿಂದ 2017-18ಕ್ಕೆ ಮತ್ತೇ 2 ಕೊಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಿ, ಲೋಕಾಪರ್ಣೆ ಮಾಡಲಾಗುವುದು ಎಂದು ವಿವರಿಸಿದರು. ಇದಲ್ಲದೆ, ನವಲಗುಂದ ಗವಿ ಮಠಕ್ಕೆ 50 ಲಕ್ಷ ರೂ, ಮಣಕವಾಡ ಮೃತ್ಯುಂಜಯ ಮಠಕ್ಕೆ 25 ಲಕ್ಷ ರೂ., ನಲವಡಿ ವೇಮನ ದೇವಸ್ಥಾನಕ್ಕೆ 25 ಲಕ್ಷ ರೂ. ಹಾಗೂ ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಯಾತ್ರಿ ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ. ನವಲಗುಂದನ ನಾಗಲಿಂಗ ಅಜ್ಜನ ಮಠಕ್ಕೆ 2016-17ಸಾಲಿನಲ್ಲಿ 15 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಬಸವರಾಜ ಮದಗುಣಕಿ, ಬಸವರಾಜ ಓಲೇಕಾರ, ಸುಭಾಸ ದುಬ್ಬದಮಟ್ಟಿ, ದೇವಪ್ಪ ತಳವಾರ, ಬಸವರಾಜ ತಳವಾರ, ಜೆಡಿಎಸ್ ತಾಲೂಕು ಅಧ್ಯಕ್ಷ ವೀರಣ್ಣ ನೀರಲಗಿ, ಎಪಿಎಂಸಿ ಸದಸ್ಯ ದ್ಯಾಮಣ್ಣ ಹೊನಕುದರಿ, ಕುಮಾರ ಮಾದರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.