BREAKING NEWS(click on the news)----------
  • ಹುಬ್ಬಳ್ಳಿಯ ಲಿಂಗಾಯತ ಬೃಹತ್ ಸಮಾವೇಶ ಯಶಸ್ವಿಗೊಳಿಸಿ : ರಾಜಣ್ಣ ಕೊರವಿ


    Date : 2017-11-04 SHARE

    ಹುಬ್ಬಳ್ಳಿ: ಐತಿಹಾಸಿಕ ಹಿನ್ನೆಲೆ ಹಾಗೂ ಪ್ರಗತಿಪರ ಚಿಂತನೆಯುಳ್ಳ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನವೆಂಬರ್ 5, ರವಿವಾರರಂದು ನಡೆಯಲಿರುವ ಲಿಂಗಾಯತ ಬೃಹತ್ ಸಮಾವೇಶಕ್ಕೆ ಪ್ರತಿಯೊಬ್ಬರು ಪಕ್ಷಾತೀತವಾಗಿ ಹಾಗೂ ಜ್ಯಾತ್ಯತೀತವಾಗಿ ಬೆಂಬಲಿಸುವ ಮೂಲಕ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವಂತೆ ಲಿಂಗಾಯತ ಸಮಾವೇಶದ ಸಂಚಾಲಕ ರಾಜಣ್ಣ ಕೊರವಿ ಮನವಿ ಮಾಡಿದ್ದಾರೆ. ಲಿಂಗಾಯತ ಧರ್ಮವು ಅತ್ಯಂತ ಪ್ರಾಚೀನ ಧರ್ಮವಾಗಿದ್ದು, ಕನ್ನಡ ನಾಡಿನಲ್ಲಿ ಉದಯಿಸಿದ ಮೊಟ್ಟ ಮೊದಲ ಧರ್ಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 12ನೇ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು ಸಮಾನತೆಯ ಹರಿಕಾರರಾಗಿ ಸ್ತ್ರೀ-ಪುರುಷ, ಜಾತಿ-ವರ್ಗದ ಯಾವುದೇ ಭೇದಭಾವವಿಲ್ಲದೆ ಆರಂಭಿಸಿದ ಉನ್ನತ ವಿಚಾರಧಾರೆಯ ಸ್ವತಂತ್ರ ಧರ್ಮ ಇದಾಗಿದೆ. ಇಂದಿನ ಸಂಸತ್ ಮಾದರಿಯಲ್ಲಿ ಅಂದೇ ಅನುಭವ ಮಂಟಪ ಅಸ್ತಿತ್ವಕ್ಕೆ ತರುವ ಮೂಲಕ ಜಗತ್ತಿನ ಗಮನ ಸೆಳೆದ ಏಕೈಕ ಧರ್ಮವಾಗಿದೆ. ಅಷ್ಟೇ ಅಲ್ಲದೆ, ಶರಣರ ವಚನ ಗ್ರಂಥಗಳು ಕನ್ನಡದಲ್ಲಿದ್ದು, ಅವುಗಳನ್ನು ಪ್ರಚುರ ಪಡಿಸಲು ಪ್ರತಿಯೊಬ್ಬರು ಆಯಾ ಜಾತಿ, ವರ್ಗ, ಮೇಲು ಕೀಳುಗಳಿಗೆ ಸೀಮಿತಗೊಳ್ಳದೆ, ಸಮಾನತೆ ಸಾರುವ ಲಿಂಗಾಯತ ಧರ್ಮದ ಜೊತೆಗೆ ಕೈ ಜೋಡಿಸಬೇಕು. ಲಿಂಗಾಯತ ಪ್ರತ್ಯೆಕ ಧರ್ಮಕ್ಕೆ ಅಗತ್ಯದ ಸರ್ಕಾರಿ ಸೌಲಭ್ಯ ದೊರಕಿಸುವಲ್ಲಿ ನಡೆದ ಈ ಪ್ರಯತ್ನಕ್ಕೆ ತಾವೆಲ್ಲ ಸಹಕರಿಸಿ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಕ್ಕೆ ಸಾಕ್ಷಿಯಾಗಬೇಕು ಎಂದು ರಾಜಣ್ಣ ಕೊರವಿ ಅವರು ವಿನಂತಿಸಿದ್ದಾರೆ.