BREAKING NEWS(click on the news)----------
  • ಹುಬ್ಬಳ್ಳಿಯಲ್ಲಿ ಲಿಂಗಾಯತರ ಶಕ್ತಿ ಪ್ರದರ್ಶನ


    Date : 2017-11-05 SHARE

    ಮುಖ್ಯಾಂಶಗಳು ಯಡಿಯೂರಪ್ಪ, ಜಗದೀಶ ಶೆಟ್ಟರ ವಿರುದ್ಧ ಹರಿಹಾಯ್ದ ಮಾತೆ ಮಹಾದೇವಿ ಲಿಂಗಾಯತರು ಒಬ್ಬರಿಗೆ ಹುಟ್ಟಿದವರು : ಕೂಡಲಸಂಗಮ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ವೀರಶೈವ ಮಠಾಧೀಶರ ವಿರುದ್ಧ ಸಿಡಿದೆದ್ದ ವಿನಯ ಕುಲಕರ್ಣಿ ಪ್ರಭಾಕರ ಕೋರೆ ವಿರುದ್ಧ ಗುಡುಗಿದ ಎಂ.ಬಿ. ಪಾಟೀಲ ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬಂದ ಜನಸಾಗರ ವಿವಿಧ ಸಮಾಜ ಬಾಂಧವರಿಂದ ಶರಬತ್, ಹಣ್ಣು, ಮಜ್ಜಿಗೆ ವಿತರಣೆ ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಆರಂಭಗೊಂಡಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಬೃಹತ್ ಲಿಂಗಾಯತ ಸಮಾವೇಶವೂ ಯಶಸ್ಸಿನತ್ತ ದಾಪುಗಾಲು ಹಾಕಿದ್ದು, ಲಿಂಗಾಯತ ಸಮಾಜ ಬಾಂಧವರಿಗೆ ಮತ್ತುಷ್ಟು ಹುರುಪು ನೀಡಿದೆ. ನಿರೀಕ್ಷೆಗೂ ಮೀರಿ ಹರಿದು ಬಂದ ಸಮಾಜ ಬಾಂಧವರು ಬೃಹತ್ ಶಕ್ತಿ ಪ್ರದರ್ಶನ ಅನಾವರಗೊಳಿಸಿದರು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಅಖಿಲ ಭಾರತ ವೀರಶೈವ ಮಹಾಸಭಾ ವಿರುದ್ಧ ಕೆಂಡಮಂಡಲವಾದರು. ಕೆಎಲ್‍ಇ ಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ ಅವರು ಲಿಂಗಾಯತರ ಹೆಸರಿನಲ್ಲಿಸಂಸ್ಥೆ ನಡೆಸುತ್ತಿದ್ದು, ಅವರ ಅನ್ನ ತಿಂದು ಅವರಿಗೆ ದ್ರೋಹ ಬಗೆಯುವುದು ನಿಲ್ಲಿಸಬೇಕು. ಇಲ್ಲದಿದ್ದರೆ ಅವರನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಬೇಕಾಗುತ್ತದೆ ಎಂದು ಗುಡುಗಿದರು. ಸಚಿವ ವಿನಯ ಕುಲಕರ್ಣಿ ಮಾತನಾಡಿ, ವೀರಶೈವ 99 ಒಳಪಂಗಡಗಳಲ್ಲಿ ಒಂದು. ಅವರು ನಮ್ಮೊಂದಿಗೆ ಬರಬೇಕು. ನಾವು ಯಾರ ವಿರುದ್ಧವೂ ಅಲ್ಲ. ಅವರ ದಿಕ್ಕು ತಪ್ಪಿಸುತ್ತಿರುವ ವಿರಕ್ತ ಮಠದ ಸ್ವಾಮೀಜಿಗಳು ನಮ್ಮೊಂದಿಗೆ ಬರದಿದ್ದರೆ ಅವರಿಗೆ ಬರುವ ದಿನಗಳಲ್ಲಿ ರಾಷ್ಟ್ರೀಯ ಬಸವ ಸೇನೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಮಾತೆ ಮಹಾದೇವಿ ಮಾತನಾಡಿ, ಬಿಜೆಪಿ ಮುಖಂಡರಾದ ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ ಲಿಂಗಾಯತರು. ಅವರು ಸತ್ತರೆ ಅವರನ್ನ ಲಿಂಗಾಯತ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಹೀಗಾಗಿ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಹೇಳಿದರು. ಇದೇ ವೇಳೆ ಕೂಡಲಸಂಗಮದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಲಿಂಗಾಯತರಿಗೆ ಕೇವಲ ಒಬ್ಬ ತಂದೆ ಬಸವಣ್ಣ. ಆದರೆ ವೀರಶೈವರಿಗೆ ಐವರು ತಂದೆ ಎಂದು ಹೇಳುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಒಟ್ಟಿನಲ್ಲಿ ಹುಬ್ಬಳ್ಳಿ ಸಮಾವೇಶವೂ ಯಶಸ್ವಿಗೊಂಡಿದ್ದು, ಇದೀಗ ಬೆಂಗಳೂರಿನತ್ತ ಎಲ್ಲರೂ ಮುಖ ಮಾಡಿದ್ದಾರೆ. ಡಿಸೆಂಬರ್‍ನಲ್ಲಿ ಬೆಂಗಳೂರಿನಲ್ಲಿ ಲಿಂಗಾಯತ ಸಮಾವೇಶದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಬರುವ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸುವ ಹುರುಪಿನಲ್ಲಿದ್ದಾರೆ. ವಿವಿಧ ಸಮಾಜ ಬಾಂಧವರಿಂದ ಲಿಂಗಾಯತರಿಗೆ ನೀರು, ಮಜ್ಜಿಗೆ, ಬಾಳೆಹಣ್ಣು: ಹುಬ್ಬಳ್ಳಿಗೆ ಹರಿದು ಬಂದ ಸಹಸ್ರಾರು ಲಿಂಗಾಯತರಿಗೆ ಅಂಜುಮನ್ ಇಸ್ಲಾಂ ಸಂಸ್ಥೆ, ಮುಸ್ಲಿಂ ರೈಟ್ಸ್ ಫೌಂಡೇಶನ್, ಎಸ್‍ಎಸ್‍ಕೆ ಸಮಾಜ ಸೇರಿದಂತೆ ವಿವಿಧ ಸಮಾಜ ಬಾಂಧವರು ಕುಡಿಯಲು ನೀರು, ಬಾಳೆಹಣ್ಣು, ಮಜ್ಜಿಗೆ, ಶರಬತ್ ಸೇರಿದಂತೆ ವಿವಿಧ ಉಪಹಾರ ವ್ಯವಸ್ಥೆ ಮಾಡುವ ಮೂಲಕ ಹೋರಾಟಕ್ಕೆ ಶಕ್ತಿ ತುಂಬಿ ಸಹೋದರತೆ ಮೆರೆದರು.