ಬಸವ ಜಯ ಮುತ್ಯುಂಜಯ ಸ್ವಾಮೀಜಿ ಹೇಳಿಕೆಗೆ ಬಸವರಾಜ ಹೊರಟ್ಟಿ ಅಸಮಾಧಾನ
Date : 2017-11-06 SHARE
ಧಾರವಾಡ : ಲಿಂಗಾಯತ ಸ್ವತಂತ್ರ್ಯ ಧರ್ಮ ಸಮಾವೇಶದಲ್ಲಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮುತ್ಯುಂಜಯ ಸ್ವಾಮೀಜಿ ನೀಡಿರುವ ಹೇಳಿಕೆಗೆ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಇಂದು ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಅದು ನಡೆಬಾರದಿತ್ತು, ಆದರೆ ನಡೆದು ಹೋಗಿದೆ. ಅದು ತಪ್ಪು ಅವರು ಯಾಕೆ ಆ ರೀತಿ ಮಾತನಾಡಿದರಂತ ನನಗೆ ಗೊತ್ತಿಲ್ಲ. ಸ್ವಾಮೀಜಿ ಆಗಿ ಆ ರೀತಿ ಮಾತನಾಡಬಾರದಿತ್ತು. ಮಾತನಾಡಿದ್ದಾರೆ. ತಪ್ಪು ಯಾರೇ ಮಾಡಿದರೂ ತಪ್ಪೇ. ಸ್ವಾಮೀಗಳೆಂದರೆ ದೇವರಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ನಾನು ಕೂಡ ವಿಷಾದ ವ್ಯಕ್ತಪಡಿಸುತ್ತೇನೆ. ಸ್ವಾಮೀಜಿ ಅವರಿಗೆ ವಿಷಾದ ವ್ಯಕ್ತಪಡಿಸಲು ಹೇಳಿದ್ದೇನೆ.ಅವರು ಕೂಡ ಈ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಕೆಲ ಸ್ವಾಮೀಜಿಗಳು ಸಂಸ್ಕೃತ ಪಂಡಿತರು ಇರುತ್ತಾರೆ. ಏನೋ ಮಾತನಾಡಲು ಹೋಗಿ ಏನೂ ಮಾತನಾಡುತ್ತಾರೆ ಎಂದ ಬಸವರಾಜ ಹೊರಟ್ಟಿ ಅವರು ಶ್ರೀಗಳ ಹೇಳಿಕೆಯನ್ನು ಯಾರೊಬ್ಬರು ಸಮರ್ಥಿಸಿಕೊಳ್ಳಬಾರದು. ಅದು ಶೋಭೆ ಅಲ್ಲ. ಆ ಸಮಾಜಕ್ಕೆ ನೋವಾಗಿದ್ದರೆ ನಾನು ಆ ಸಮಾಜದ ಸಹೋದರರ ಸಹೋದರರಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ಅವರಿಗೆ ಆದಷ್ಟೇ ನೋವು ನನಗೂ ಆಗಿದೆ. ತಪ್ಪು ಆಗಿದೆ. ಈಗ ಪಶ್ಚಾತ್ತಾಪ ಹಾಗೂ ವಿಷಾದ ಬಿಟ್ಟರೆ ಬೇರೆ ಮಾರ್ಗಗಳಿಲ್ಲ ಎಂದು ಹೇಳಿದರು. ಸ್ವಾಮೀಜಿಗಳಲ್ಲಿ ಕೂಡ ಬಹಳಷ್ಟು ರಾಜಕಾರಣ ಇದೆ. ಅವು ಇಂತಹಲ್ಲಿ ಸಮಯದಲ್ಲಿ ಹೊರ ಬರುತ್ತವೆ. ಆದರೆ ಇದರಿಂದ ಹೋರಾಟಕ್ಕೆ ಹಿನ್ನಡೆ ಆಗಲ್ಲ. ಈ ಹಿಂದೆ ಮಾತೆ ಮಹದಾದೇವಿ ಅವರು ಮಾತನಾಡಿದಾಗ ನಾವು ಅವರಿಗೆ ತಿಳಿ ಹೇಳಿದ್ದೇವು. ಅವರು ಅದನ್ನು ಕೈಬಿಟ್ಟಿದ್ದಾರೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಎಂದು ಬಸವರಾಜ ಹೊರಟ್ಟಿ ಹೇಳಿದರು. ಅಖಿಲ ಭಾರತ ವೀರಶೈವ ಮಹಸಭಾ ಅಧ್ಯಕ್ಷ ಶ್ಯಾಮನೂರು ಶಿವಶಿಂಕರಪ್ಪ ಅವರನ್ನು ನಾಡೋಜ ಪಾಟೀಲ ಪುಟ್ಟಪ್ಪ ಮತ್ತು ನಾನು ಮತ್ತೋಮ್ಮೆ ಭೇಟಿಯಾಗಿ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ. ಅವರು ಒಳಗಿಂದ ನಮ್ಮೊಂದಿಗೆ ಇದ್ದಾರೆ. ಆದರೆ ಕೆಲವರು ಅವರ ದಿಕ್ಕು ತಪ್ಪಿಸುತ್ತಿದ್ದಾರೆ. ಅವರು ನಮ್ಮೊಂದಿಗೆ ಬರದಿದ್ದರೆ ಪ್ರತ್ಯೇಕ ಲಿಂಗಾಯತ ಮಹಾಸಭಾ ಸ್ಥಾಪನೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.