BREAKING NEWS(click on the news)----------
  • ಕೂಡಲ ಸಂಗಮ ಸ್ವಾಮೀಜಿ ಹೇಳಿಕೆಗೆ ಅಪಾರ್ಥ ಸರಿಯಲ್ಲ : ಸಚಿವ ವಿನಯ ಕುಲಕರ್ಣಿ


    Date : 2017-11-06 SHARE

    ಧಾರವಾಡ : ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ವಿವಾದಾತ್ಮಕ ಹೇಳಿಕೆಗೆ ತಪ್ಪು ಅರ್ಥ ಕಲ್ಪಿಸಬಾರದು. ನಮ್ಮ ಭಾಗದಲ್ಲಿರುವ ಪ್ರತಿಯೊಬ್ಬ ಸ್ವಾಮೀಜಿಗಳಿಗೂ ಅಪ್ಪ ಎಂದು ಕರೆಯಲಾಗುತ್ತದೆ. ಅದನ್ನ ಗೌರವದಿಂದ ಕರೆಯಲಾಗುತ್ತದೆ ಎಂದು ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷರು ಹಾಗೂ ಸಚಿವ ವಿನಯ ಕುಲಕರ್ಣಿ ಅವರು ಸ್ಪಷ್ಟ ಪಡಿಸಿದ್ದಾರೆ. ಅವರು ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಅದು ಭಾವನಾತ್ಮಾಕ ವಿಚಾರ. ಅದನ್ನು ದೀರ್ಘಕ್ಕೆ ತೆಗೆದುಕೊಳ್ಳಬಾರದು. ಸಣ್ಣವರಿಂದ ಹಿಡಿದು ದೊಡ್ಡವರರಗೆ ಅಪ್ಪ ಅನ್ನುವುದು ಸಹಜ. ಆ ರೀತಿ ಅನ್ನುವುದು ಕರೆಯುವುದು ಬೇಡ ಎಂದರೆ ಕರೆಯುವುದು ಬಿಡುತ್ತಾರೆ. ಬಂಧುಗಳಿಗೆ ನೋವಾಗಿದ್ದರೆ ಅದನ್ನು ಸರಿಪಡಿಸಲಾಗುವುದು. ಈಗಾಗಲೇ ಸ್ವಾಮೀಜಿ ಅವರು ಕೂಡ ವಿಷಾದ ವ್ಯಕ್ತಪಡಿಸಿದ್ದಾರೆ. ಎ.ಎಸ್. ಪಾಟೀಲ ನಡಹಳ್ಳಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ವಿನಯ ಕುಲಕರ್ಣಿ ಅವರು ಮಠ ಸೇರುವ ವಯಸ್ಸಲ್ಲ. ನಮಗೆ ಇನ್ನೂ ಸರ್ಕಾರ ಅಧಿಕಾರಕ್ಕೆ ತರುವ ಹುಮ್ಮಸ್ಸು ಹುರುಪು ಇದೆ. ಸಮಾಜ ಸೇವೆ ಮಾಡುವರೆಲ್ಲ ಮಠ ಸೇರಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ನಡಹಳ್ಳಿ, ಹುಚ್ಚ, ಅವ ಎನ್ ಶ್ಯಾಣಾ ಅದಾನ. ಅವನಿಗೇನ್ ಗೊತ್ತೈತಿ ಎಂದರು.