BREAKING NEWS(click on the news)----------
  • ಉಡುಪಿಯ ಅಷ್ಟ ಮಠಗಳ ವಿರುದ್ಧ ಬಸವರಾಜ ದೇವರು ತೀವ್ರ ವಾಗ್ದಾಳಿ


    Date : 2017-11-08 SHARE

    ಧಾರವಾಡ : ಉಡುಪಿಯ ಅಷ್ಟ ಮಠಗಳು ಕನಕರ ಕಾವ್ಯಗಳನ್ನು ಕದ್ದಿದ್ದಾರೆ ಎಂದು ಮನಸೂರಿನ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ಗಂಭೀರ ಆರೋಪ ಮಾಡಿದ್ದಾರೆ. ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬುಧವಾರ ನಡೆದ ಕನಕ ಪಂಚಮಿಯ ಉತ್ಸವದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಗಂಭೀರ ಆರೋಪ ಮಾಡಿದ್ದಾರೆ. ಕೂಡಲೇ ಆ ಕಾವ್ಯಗಳನ್ನು ಅಷ್ಟಮಠಗಳು ಪ್ರಕಟಿಸಬೇಕು. ಅಲ್ಲದೆ, ಶ್ರೀ ಕೃಷ್ಣನ ಪಕ್ಕದಲ್ಲೇ ಕನಕ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಆನಂತರ ಹಲವು ವರ್ಷಗಳಿಂದ ಶ್ರೀ ಕೃಷ್ಣನಿಗೆ ಸ್ಥಗಿತಗೊಳಿಸಿರುವ ರೊಟ್ಟಿ ನೈವೈದ್ಯ ಪುನಃ ಆರಂಭಿಸಬೇಕು. ಈ ಹಿಂದೆ ಸ್ವತಃ ಕನಕದಾಸರು ರೊಟ್ಟಿ ನೈವೈದ್ಯ ಮಾಡುತ್ತಿದ್ದರು. ಹೀಗಾಗಿ ಅದನ್ನು ಅಷ್ಟಮಠಗಳು ಅದನ್ನು ಪುನಃ ಆರಂಭಿಸಬೇಕು ಎಂದು ಬಸವರಾಜ ದೇವರು ಆಗ್ರಹಿಸಿದ್ದಾರೆ.