ನೋಟ್ ಬ್ಯಾನ್‍ಗೆ ಒಂದು ವರ್ಷ : ಕಾಂಗ್ರೆಸ್‍ನಿಂದ ಕರಾಳ ದಿನಾಚರಣೆ
Date : 2017-11-09 SHARE
ಧಾರವಾಡ : ಪ್ರಧಾನಿ ನರೇಂದ್ರ ಮೋದಿ ಅವರ ನೋಟ್‍ಬಂಧಿಗೆ ಇಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಧಾರವಾಡದ ವಿವೇಕಾನಂದ ವೃತ್ತದಲ್ಲಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್‍ನಿಂದ ಕರಾಳ ದಿನಾಚರಣೆ ಆಚರಿಸಲಾಯಿತು. ಕೆಪಿಸಿಸಿ ಸದಸ್ಯ ದೀಪಕ ಚಿಂಚೋರೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ನೋಟ್ ಬಂಧಿ ಮಾಡುವ ಮೂಲಕ ಜನ ಸಾಮಾನ್ಯರ ಜೀವನ ಮಟ್ಟ ಕುಸಿಯುವಂತೆ ಮಾಡಿದ್ದಾರೆ. ಜಿಡಿಪಿ ದರ ಶೇ. 3ಕ್ಕೆ ಬಂದು ನಿಂತಿದೆ. ಕಪ್ಪು ಹಣ ವಾಪಾಸ್ ತರುವ ಮಾತನಾಡಿದ್ದರು. ಎಲ್ಲಿದೆ ಕಪ್ಪು ಹಣ ಎಂದು ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಬಣ್ಣದ ಮಾತುಗಳು ಬಹಳ ದಿನ ನಡೆಯುವುದಿಲ್ಲ. ಜನ ಬರುವ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗುಡುಗಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸ್ವಾತಿ ಮಳಗಿ, ರಾಬರ್ಟ ದದ್ದಾಪುರಿ, ಸುಭಾಸ ಶಿಂಧೆ, ದಾನಪ್ಪ ಕಬ್ಬೇರ, ಪಿ.ಎಚ್. ನೀರಲಕೇರಿ, ಆನಂದ ಜಾಧವ, ಹೇಮಂತ ಗುರ್ಲಹೊಸುರ, ರತ್ನಾಕರ ದೇವಾನಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.