BREAKING NEWS(click on the news)----------
  • ಮಹಾನಗರ ಪಾಲಿಕೆ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ವಿರುದ್ದ ವಕೀಲರ ಪ್ರತಿಭಟನೆ


    Date : 2017-11-09 SHARE

    ಧಾರವಾಡ : ಧಾರವಾಡ ವಕೀಲರ ಸಂಘವು ಇಂದು ಕಲಾಪದಿಂದ ದೂರ ಉಳಿದು ಆರ್. ಯು. ಬೆಳ್ಳಕ್ಕಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ವಕೀಲರ ಸಂಘದಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ನೂರಾರು ವಕೀಲರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ತಾಕತ್ ಇದ್ದರೆ ಹನ್ನೇರಡು ಗಂಟೆಯೊಳಗೆ ಬಹಿರಂಗ ಚರ್ಚಗೆ ಬಾ ಎಂದು ಸವಾಲ್ ಹಾಕಿದರು. ಹಿರಿಯ ವಕೀಲ ರಾಮಚಂದ್ರ ಅವಲಕ್ಕಿ ಅವರು ಎಕವಚನದಲ್ಲೇ ವಾಗ್ದಾಳಿ ನಡೆಸಿದರು. ಪೊಲೀಸರು ಧಾರವಾಡದ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲು ಅವಕಾಶ ನಿರಾಕರಿಸಿದರು. ಇದರಿಂದ ರೊಚ್ಚಿಗೆದ್ದ ವಕೀಲರು ಪಾಲಿಕೆ ಕಚೇರಿ ಎದುರಿನ ರಸ್ತೆ ತಡೆ ಮಾಡಿ ಆಕ್ರೋಶ ಹೊರಹಾಕಿದರು. ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲು ಪೊಲೀಸ್ ನಿರಾಕರಣೆ ಮಾಡಿದ್ದಕ್ಕೆ ತೀವ್ರ ಅಸಮಾಧಾನಗೊಂಡರು. ಪೊಲೀಸ್ ಇಲಾಖೆಯ ಕಾರ್ಯ ವೈಖರಿಗೆ ಗರಂ ಆದ ವಕೀಲರು ಸಿದ್ದಲಿಂಗಯ್ಯ ಅವರು ಪಾಲಿಕೆ ಅಧಿಕಾರಿ. ಅವರೇನು ಪಾಕಿಸ್ತಾನ ಗಡಿಯಲ್ಲಿ ಕೆಲಸ ಮಾಡ್ತಿದ್ದಾರಾ. ಪೋಲಿಸ್ ಅವರೊಂದು ನ್ಯಾಯ ನಮಗೊಂದು ನ್ಯಾಯ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ವಕೀಲರಾದ ಕೆ.ಹೆಚ್. ಪಾಟೀಲ, ನಿಂಗಪ್ಪ ಜೋಡಳ್ಳಿ, ಕಲ್ಮೇಶ ಲಿಂಗಣ್ಣವರ ಸೇರಿದಂತೆ ಹಲವು ವಕೀಲರು ಪಾಲ್ಗೊಂಡಿದ್ದರು.