ನೋಟಿಸ್ ಗೆ ಹೆದರಲ್ಲ ಸಚಿವ ವಿನಯ ಕುಲಕರ್ಣಿ
Date : 2017-11-10 SHARE
ಧಾರವಾಡ: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಕುರಿತಂತೆ ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ವಿನಯ ಕುಲಕರ್ಣಿ ಸೇರಿ ನಾಲ್ವರು ಪ್ರಮುಖರಿಗೆ ವಕೀಲರಿಂದ ನೋಟಿಸ್ ನೀಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಾವು ಯಾವ ನೋಟಿಸ್ ಗೂ ಹೆದರುವುದಿಲ್ಲ. ಇಂತಹ ೧೦೦ ನೋಟಿಸ್ ಬಂದ್ರೂ ಲಿಂಗಾಯತ ಧರ್ಮ ಪ್ರತ್ಯೇಕತೆ ಹೋರಾಟ ಕೈ ಬಿಡುವುದಿಲ್ಲ ಎಂದು ಹೇಳಿದರು. ಯಾವನೋ ಹುಚ್ಚ ನೋಟಿಸ್ ನೀಡಿದ್ರೆ ಹೋರಾಟ ಕೈ ಬಿಡಬೇಕಾ? ಎಂದು ಸವಾಲು ಹಾಕಿದರು. ಲಿಂಗಾಯತ ಧರ್ಮದ ಹೋರಾಟಕ್ಕೆ ಜಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಈ ಹೋರಾಟ ರಾಜಕೀಯ ಪ್ರೇರಿತವಲ್ಲ. ಲಿಂಗಾಯತ ಧರ್ಮವಾಗುವರೆಗೆ ನಿರಂತರ ಹೋರಾಟ ಮಾಡುತ್ತೇನೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ನಾನು ಎಲ್ಲ ಸಾಧಕ- ಬಾಧಕಗಳನ್ನು ತಿಳಿದುಕೊಂಡೆ ಹೋರಾಟಕ್ಕೆ ಇಳಿದ್ದಿದ್ದೇನೆ ಎಂದು ಹೇಳಿದರು. ನಾನು ತಾಯಿ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಈ ಹೋರಾಟದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡವಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಸ್ಪಷ್ಟ ಪಡಿಸಿದ್ದಾರೆ.